ಮಂಗಳೂರು:ಅಪರಿಚಿತ ವ್ಯಕ್ತಿಗಳ ತಂಡವೊಂದು ಬೈಕ್ನಲ್ಲಿ ಬಂದು ಯುವಕನೋರ್ವನ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ವಿಟ್ಲ ಕನ್ಯಾನ ಗ್ರಾಮದ ಶಿರಂಕಲ್ಲು ಎಂಬಲ್ಲಿ ನಡೆದಿದೆ.ವಿಟ್ಲ ಬಳಿಯ ಪೊಯ್ಯೆಗದ್ದೆ ನಿವಾಸಿ ಅಬ್ದುಲ್ ಮುಸ್ತಾಕ್ (21) ಹಲ್ಲೆಗೊಳಗಾದವರು.
ಅಪರಿಚಿತ ವ್ಯಕ್ತಿಗಳಿಂದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ - etv barat
ಅಪರಿಚಿತ ವ್ಯಕ್ತಿಗಳ ತಂಡವೊಂದು ವ್ಯಕ್ತಿಯೋರ್ವನ ಮೇಲೆ ಏಕಾಏಕಿ ದಾಳಿ ನಡೆಸಿದೆ. ಪರಿಣಾಮ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹಲ್ಲೆಗೊಳಗಾದ ಅಬ್ದುಲ್ ಮುಸ್ತಾಕ್ (ಸಂಗ್ರಹ ಚಿತ್ರ)
ನಿನ್ನೆ ರಾತ್ರಿ ಕನ್ಯಾನದ ಕೆಳಗಿನ ಪೇಟೆಯಿಂದ ಶಿರಂಕಲ್ಲು ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳ ತಂಡ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದೆ. ಘಟನೆಯಿಂದ ಅಬ್ದುಲ್ ಮುಸ್ತಾಕ್ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರ ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.