ಮಂಗಳೂರು:ಔಷಧಿಗಾಗಿ ಮಧ್ಯರಾತ್ರಿ ಮನೆಯಿಂದ ಹೊರಬಂದ ಮಹಿಳೆಗೆ ಸಹಾಯ ಮಾಡಿದ ಕದ್ರಿ ಪೊಲೀಸ್ ಠಾಣೆಯ ಎಎಸ್ಐ ಸಂತೋಷ್ ಕುಮಾರ್ ಅವರ ಕಾರ್ಯವನ್ನು ಗುರುತಿಸಿ ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅವರು ಎಎಸ್ಐ ಅವರನ್ನು ಅಭಿನಂದಿಸಿದ್ದಾರೆ.
ಎಎಎಸ್ಐ ಕಾರ್ಯಕ್ಕೆ ಸಿಕ್ತು ಗೌರವ : ಕಮಿಷನರ್ರಿಂದ ಅಭಿನಂದನೆ - etv bharat
ಮಧ್ಯರಾತ್ರಿ ವೇಳೆ ಮಹಿಳೆಯೊಬ್ಬರು ಔಷಧಿ ಅಂಗಡಿಗೆ ಹೋಗುತ್ತಿರುವುದನ್ನು ಗಮನಿಸಿ ಕದ್ರಿ ಪೊಲೀಸ್ ಠಾಣೆಯ ಎಎಸ್ಐ ಸಂತೋಷ್ ಕುಮಾರ್ ಅವರು ಮಾಡಿದ ಸಹಾಯವನ್ನು ಗುರುತಿಸಿ ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅವರು ಎ ಎಸ್ ಐ ಅವರನ್ನು ಅಭಿನಂದಿಸಿದ್ದಾರೆ.
ಎಎಎಸ್ಐ ಕಾರ್ಯಕ್ಕೆ ಸಿಕ್ತು ಗೌರವ : ಕಮಿಷನರ್ರಿಂದ ಅಭಿನಂದನೆ
ತಮ್ಮ ತಂದೆಯ ಅನಾರೋಗ್ಯ ಹಿನ್ನೆಲೆ ಮಹಿಳೆ ಮಧ್ಯರಾತ್ರಿ ಒಂದು ಗಂಟೆಯಲ್ಲಿ ಮೆಡಿಕಲ್ ಶಾಪ್ ಹುಡುಕಿಕೊಂಡು ಹೊರ ಬಂದಿದ್ದರು. ಮಧ್ಯರಾತ್ರಿ ಮಾರ್ಗಮಧ್ಯೆ ಮಹಿಳೆಯನ್ನು ಗಮನಿಸಿದ ಎಎಸ್ಐ ಸಂತೋಷ್ ಅವರು ಮಹಿಳೆಯನ್ನು ತಮ್ಮಸಾಗರ್ವಾಹನದಲ್ಲಿ ಮೆಡಿಕಲ್ ಶಾಪ್ಗೆ ಕರೆದುಕೊಂಡು ಹೋಗಿ ಮತ್ತೆ ಅವರ ಮನೆಗೆ ಬಿಟ್ಟಿದ್ದಾರೆ.
ಈ ಬಗ್ಗೆ ಆ ಮಹಿಳೆ ಪೊಲೀಸ್ ಕಮೀಷನರ್ಗೆ ತಿಳಿಸಿದ್ದು, ಅಧಿಕಾರಿಯ ಕಾರ್ಯವನ್ನು ಮೆಚ್ಚಿ ಮಂಗಳೂರು ಪೊಲೀಸ್ ಕಮೀಷನರ್ ಎಎಸ್ಐ ಸಂತೋಷ್ ಅವರನ್ನು ಅಭಿನಂದಿಸಿದ್ದಾರೆ.