ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಯುವಕ ಮತ್ತು ಯುವತಿ ಮಾಡಿದ ವಾಟ್ಸಪ್ ಚಾಟ್ನಿಂದಾಗಿ ಆತಂಕ ಸೃಷ್ಟಿಯಾಗಿ ವಿಮಾನ ಪ್ರಯಾಣ ಮೊಟಕುಗೊಳಿಸಿ ತಪಾಸಣೆ ನಡೆಸಿದ ಘಟನೆ ಇಂದು ನಡೆದಿದೆ.
ಆಗಿದ್ದೇನು?.. ಯುವಕ ಮತ್ತು ಯುವತಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ಯುವಕ ಮುಂಬೈಗೆ ತೆರಳುತ್ತಿದ್ದು, ಯುವತಿ ಬೆಂಗಳೂರಿಗೆ ತೆರಳಲು ಬಂದಿದ್ದಳು. ಆ ಬಳಿಕ ಇವರಿಬ್ಬರು ವಾಟ್ಸಪ್ ನಲ್ಲಿ ಚಾಟ್ ಮಾಡಲು ತೊಡಗಿದ್ದಾರೆ. ಮುಂಬೈ ವಿಮಾನದಲ್ಲಿ ಕುಳಿತಿದ್ದ ಯುವಕ ಮಾಡುತ್ತಿದ್ದ ಚಾಟಿಂಗ್ಅನ್ನು ಆತನ ಹಿಂಬದಿ ಸೀಟ್ನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಗಮನಿಸಿದ್ದಾರೆ. ಅದರಲ್ಲಿ ವಿಮಾನದ ಭದ್ರತೆಗೆ ಆತಂಕವೊಡ್ಡುವ ವಿಚಾರವಿದೆ ಎಂದು ತಕ್ಷಣ ವಿಮಾನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.