ಪುತ್ತೂರು (ದ.ಕ): ನಾನು ದಲಿತ್ ಸೇವಾ ಸಮಿತಿಯನ್ನು ಬಿಟ್ಟು ಬೇರೆ ಸಂಘಟನೆ ಕಟ್ಟಿಕೊಂಡಿದ್ದೇನೆಂದು ದಲಿತ್ ಸೇವಾ ಸಮಿತಿ ಸ್ವಯಂ ಘೋಷಿತ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ನನ್ನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯವರ ಮೂಲಕ ಸುಳ್ಳು ವಂಚನೆಯ ದೂರು ನೀಡಿದ್ದಾರೆ. ಇದು ನನ್ನ ತೇಜೋವಧೆ ಮಾಡುವ ಹುನ್ನಾರ ಎಂದು ಅಂಬೇಡ್ಕರ್ ಅಪತ್ಬಾಂಧವ ಟ್ರಸ್ಟ್‌ನ ಜಿಲ್ಲಾಧ್ಯಕ್ಷ ರಾಜು ಹೊಸ್ಮಠ ಹೇಳಿದ್ದಾರೆ.
ನಾನು ದಲಿತ್ ಸೇವಾ ಸಮಿತಿ ಜಿಲ್ಲಾ ಉಪಾಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು, ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ಧನಂಜಯ ನಾಯ್ಕ ಅವರ ಉಪಸ್ಥಿತಿಯಲ್ಲಿ ಸಮಾಲೋಚನಾ ಸಭೆ ನಡೆಸಿದ ನಂತರವೇ ಕ್ರಾಂತಿಸೇನಾ ರಾಜ್ಯಾಧ್ಯಕ್ಷ ಡಾ.ಪರಮೇಶ್ ಹಿರಿಯೂರುಕರ್ ಅವರ ಮೂಲಕ ಸದಸ್ಯತ್ವವನ್ನು ಮಾಡಿದ್ದು, ನಾನು 20 ಗ್ರೂಪ್, ಅಣ್ಣಪ್ಪ ಕಾರೆಕ್ಕಾಡು ಅವರು 25 ಗ್ರೂಪ್, ಧನಂಜಯ ನಾಯ್ಕ 12 ಗ್ರೂಪ್, ಸೇಸಪ್ಪ ಬೆದ್ರಕಾಡು ಅವರು 1 ಗ್ರೂಪ್ ರಚಿಸಿದ್ದು, ಎಲ್ಲವೂ ಕಾನೂನಾತ್ಮಕವಾಗಿವೆ ಎಂದರು.
ಇದೀಗ ಕೆಲವು ದಿನಗಳ ಹಿಂದೆ ನಾನು ದಲಿತ್ ಸೇವಾ ಸಮಿತಿ ಸಂಘಟನೆಯಿಂದ ಹೊರ ಬಂದು ಹೊಸ ಸಂಘಟನೆಯನ್ನು ಕಟ್ಟಲು ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ನನಗೆ ಕರೆ ಮಾಡಿ ಗಿರಿಧರ ನಾಯ್ಕ ಅವರ ಜೊತೆ ಸಂಘಟನೆ ಮಾಡಿದ್ದಲ್ಲಿ ನಾನು ಸುಮ್ಮನೆ ಇರುವುದಿಲ್ಲ ಎಂದಿದ್ದರು. ಇದರ ಬೆನ್ನಲ್ಲೇ ಸೆ.19ರಂದು 5 ಜನ ಮಹಿಳೆಯರನ್ನು ನಗರ ಠಾಣೆಗೆ ಕಳುಹಿಸಿ ನನ್ನ ವಿರುದ್ಧ ಸುಳ್ಳು ವಂಚನೆ ದೂರು ನೀಡಿದ್ದಾಋಎ ಎಂದರು.