ದಕ್ಷಿಣ ಕನ್ನಡ/ಬಂಟ್ವಾಳ:ಲಾಕ್ಡೌನ್ ಸಮಯದಲ್ಲಿ ಮದ್ಯಪಾನ ಮಾಡಲು ಸಾರ್ವಜನಿಕ ಸ್ಥಳದಲ್ಲಿ ಅವಕಾಶ ಮಾಡಿಕೊಟ್ಟ ಪ್ರರಕಣ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮದ್ಯ ಸೇವಿಸಲು ಸ್ಥಳಾವಕಾಶ: ಬಂಟ್ವಾಳದಲ್ಲಿ ಇಬ್ಬರು ಪೊಲೀಸರ ವಶಕ್ಕೆ - ಪುಂಜಾಲಕಟ್ಟೆ ಪೊಲೀಸ
ಲಾಕ್ಡೌನ್ ಜಾರಿಯಾದಾಗಿನಿಂದ ಮದ್ಯದಂಗಡಿಗಳು ಬಂದ್ ಆಗಿವೆ. ಈ ನಡುವೆ ಸಾರ್ವಜನಿಕ ಸ್ಥಳದಲ್ಲಿಯೇ ಮದ್ಯಪಾನಕ್ಕೆ ಅವಕಾಶ ಮಾಡಿಕೊಟ್ಟ ಹಿನ್ನೆಲೆ ಪುಂಜಾಲಕಟ್ಟೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಮದ್ಯದ ಪ್ಯಾಕೇಟ್ಗಳು ಹಾಗೂ ಪತ್ತಿತ್ತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಮದ್ಯಪಾನ ಮಾಡಲು ಸ್ಥಳಾವಕಾಶ: ಬಂಟ್ವಾಳದಲ್ಲಿ ಇಬ್ಬರು ಪೊಲೀಸರ ವಶಕ್ಕೆ
ಬಡಗಕಜೆಕಾರು ಗ್ರಾಮದ ಮಾಡ ಎಂಬಲ್ಲಿ ದಿನಸಿ ಅಂಗಡಿಯ ಬಳಿ ಮದ್ಯ ಸೇವಿಸಲು ಅನುವು ಮಾಡಿಕೊಡುತ್ತಿದ್ದ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸ್ ಉಪ ನಿರೀಕ್ಷಕಿ ಸೌಮ್ಯಾ ದಾಳಿ ನಡೆಸಿ ಮದ್ಯ ಸೇವನೆ ಮಾಡಲು ಅನುವು ಮಾಡಿಕೊಟ್ಟ ಆರೋಪದಲ್ಲಿ ಶೋಭಾ (42) ಮತ್ತು ಮದ್ಯ ಸೇವನೆ ಮಾಡಲು ಬಂದಿದ್ದ ಆರೋಪಿ ಸಂದೇಶ (31) ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಅವರಿಂದ ಮದ್ಯ ತುಂಬಿದ ಪ್ಯಾಕೇಟ್ಗಳು ಹಾಗೂ ಮತ್ತಿತರ ಪರಿಕರಗಳುಳ್ಳ ಚೀಲವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.