ಕರ್ನಾಟಕ

karnataka

ETV Bharat / state

Video viral: ಸಂಪಾಜೆ ಚೆಕ್​​ ಪೋಸ್ಟ್​ನಲ್ಲಿ ಅಧಿಕಾರಿಗಳಿಂದ ಲಂಚಾವತಾರ ಆರೋಪ

ಸುಳ್ಯ-ಕೊಡಗು ಗಡಿ ಪ್ರದೇಶದ ಸಂಪಾಜೆ ಚೆಕ್‌ ಪೋಸ್ಟ್‌ ಮೂಲಕ ದಾಟುವ ಪ್ರತಿಯೊಂದು ಮರ ಅಥವಾ ಮರದ ಉತ್ಪನ್ನಗಳನ್ನು ಸಾಗಿಸುವ ಲಾರಿಗಳು ಸರಿಯಾದ ದಾಖಲೆಗಳನ್ನು ಹೊಂದಿದ್ದರೂ 300 ರೂಪಾಯಿಂದ 500 ರೂಪಾಯಿವರೆಗೆ ಚೆಕ್ ಪೋಸ್ಟ್ ಸಿಬ್ಬಂದಿಗೆ ನೀಡಬೇಕೆಂಬ ಆರೋಪ ಕೇಳಿಬಂದಿದೆ.

demand-for-bribery-of-officials-at-sampaje-check-post
ಸಂಪಾಜೆ ಚೆಕ್​​ಪೊಸ್ಚ್ ನಲ್ಲಿ ಅಧಿಕಾರಿಗಳ ಲಂಚಾವತಾರ

By

Published : May 27, 2021, 7:47 PM IST

Updated : May 27, 2021, 8:06 PM IST

ಸುಳ್ಯ(ದಕ್ಷಿಣ ಕನ್ನಡ): ಕೊಡಗು ಗಡಿ ಭಾಗದಲ್ಲಿ ಬರುವ ಅರಣ್ಯ ಇಲಾಖೆಯ ಚೆಕ್ ಪೋಸ್ಟ್​​​ನಲ್ಲಿ, ಹಣ ಕೊಡಿ ಗಾಡಿ ಬಿಡುತ್ತೇನೆ ಎಂದು ಅಧಿಕಾರಿಯೋರ್ವ ಹೇಳುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಂಪಾಜೆ ಚೆಕ್​​ಪೋಸ್ಚ್ನಲ್ಲಿ ಅಧಿಕಾರಿಗಳಿಂದ ಲಂಚಾವತಾರ?

ಓದಿ: ಮೇಕೆದಾಟು ಯೋಜನೆ ವಿವಾದ: ಕಾನೂನು ಹೋರಾಟಕ್ಕೆ ಮುಂದಾದ ರಾಜ್ಯ ಸರ್ಕಾರ

ಸುಳ್ಯ-ಕೊಡಗು ಗಡಿ ಪ್ರದೇಶದ ಸಂಪಾಜೆ ಚೆಕ್‌ ಪೋಸ್ಟ್‌ ಮೂಲಕ ದಾಟುವ ಪ್ರತಿಯೊಂದು ಮರ ಅಥವಾ ಮರದ ಉತ್ಪನ್ನಗಳನ್ನು ಸಾಗಿಸುವ ಲಾರಿಗಳು ಸರಿಯಾದ ದಾಖಲೆಗಳನ್ನು ಹೊಂದಿದ್ದರೂ 300 ರೂಪಾಯಿಂದ 500 ರೂಪಾಯಿವರೆಗೆ ಚೆಕ್ ಪೋಸ್ಟ್ ಸಿಬ್ಬಂದಿಗೆ ನೀಡಬೇಕೆಂಬುದು ಚಾಲಕರ ಆರೋಪವಾಗಿದೆ.

ಇದಕ್ಕೆ ಪೂರಕ ಎಂಬಂತೆ ಅಧಿಕಾರಿಯೋರ್ವ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ. ಲಾಕ್​​ಡೌನ್ ಸಂಕಷ್ಟ ಕಾಲದಲ್ಲೂ ಲಜ್ಜೆಗೆಟ್ಟು ಲಂಚ ಪಡೆಯುತ್ತಿರುವ ಈ ಅಧಿಕಾರಿಗಳ ವಿರುದ್ಧ ಅರಣ್ಯ ಸಚಿವರು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Last Updated : May 27, 2021, 8:06 PM IST

ABOUT THE AUTHOR

...view details