ಮಂಗಳೂರು: ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ರಸ್ತೆಗೆ ಬಿದ್ದ ಸವಾರನ ಮೇಲೆ ಹಿಂಬಂದಿಯಿಂದ ಬಂದ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಳೆಯಂಗಡಿ ಬಳಿಯ ತೋಕೂರು ಸರ್ಕಾರಿ ಶಾಲೆಯ ಬಳಿ ನಡೆದಿದೆ.
ಬೈಕ್ಗಳ ನಡುವೆ ಡಿಕ್ಕಿಯಾಗಿ ರಸ್ತಗೆ ಬಿದ್ದ ಸವಾರ: ಹಿಂದಿನಿಂದ ಬಂದ ಬಸ್ ಹರಿದು ಸಾವು - biker killed in an accident
ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಎದುರಿಗೆ ಬರುತ್ತಿದ್ದ ಮತ್ತೊಂದು ಬೈಕ್ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಬಸ್ ಹರಿದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಮಂಗಳೂರಿನ ಹಳೆಯಂಗಡಿ ಬಳಿ ನಡೆದಿದೆ.
ಹಿಂದಿನಿಂದ ಬಂದ ಬಸ್ ಹರಿದು ಬೈಕ್ ಸವಾರ ಸಾವು
ಮೂಡುಬಿದಿರೆ ನಿವಾಸಿ ಮೋಕ್ಷಿತ್ ಮೃತ ದುರ್ದೈವಿ. ಮತ್ತೊಬ್ಬ ಬೈಕ್ ಸವಾರ ಬಸವರಾಜ್ ಎಂಬಾತನಿಗೆ ಗಂಭೀರ ಗಾಯಗಳಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಂಗಳೂರಿನಿಂದ ಕಿನ್ನಿಗೋಳಿ ಕಡೆ ಬರುತ್ತಿದ್ದ ಸರ್ವಿಸ್ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ ಸವಾರ ಮೋಕ್ಷಿತ್ ಎದುರಿಗೆ ಬರುತ್ತಿದ್ದ ಮತ್ತೊಂದು ಬೈಕ್ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಈ ಬಗ್ಗೆ ಸುರತ್ಕಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.