ಕರ್ನಾಟಕ

karnataka

ETV Bharat / state

ನವ ಮಂಗಳೂರು ಬಂದರಿಗೆ ಎರಡನೇ ವಿದೇಶಿ ಪ್ರವಾಸಿ ಹಡಗು: 704 ಪ್ರವಾಸಿಗರ ಆಗಮನ - ಹಡಗು

ಈ ತಿಂಗಳ 2ನೇ ಪ್ರವಾಸಿ ಹಡಗು ಗುರುವಾರ ನವಮಂಗಳೂರು ಬಂದರಿಗೆ ಆಗಮಿಸಿ ಸಂಜೆ 5 ಗಂಟೆಗೆ ಮುಂದಿನ ತಾಣವಾದ ಕೊಚ್ಚಿನ್ ಬಂದರಿಗೆ ತೆರಳಿದೆ.

A Fred Olsen Cruise Lines ship
ಫ್ರೆಡ್ ಓಲ್ಸೆನ್ ಕ್ರೂಸ್ ಲೈನ್ಸ್ ಹಡಗು

By ETV Bharat Karnataka Team

Published : Dec 15, 2023, 12:04 PM IST

ಮಂಗಳೂರು: ಈ ಋತುವಿನ ಎರಡನೇ ಪ್ರವಾಸಿ ಹಡಗು ಗುರುವಾರ ನವ ಮಂಗಳೂರು ಬಂದರಿಗೆ ಆಗಮಿಸಿ ತೆರಳಿದೆ. ಫ್ರೆಡ್ ಓಲ್ಸೆನ್ ಕ್ರೂಸ್ ಲೈನ್ಸ್ ಹಡಗು "MS BOLETTE" ನಿನ್ನೆ ಬೆಳಗ್ಗೆ 8 ಗಂಟೆಗೆ ನವ ಮಂಗಳೂರು ಬಂದರಿಗೆ ಆಗಮಿಸಿತ್ತು. ಹಡಗಿನಲ್ಲಿ 704 ಪ್ರಯಾಣಿಕರು ಮತ್ತು 645 ಸಿಬ್ಬಂದಿ ಆಗಮಿಸಿದ್ದರು.

ಪ್ರಯಾಣಿಕರಿಗೆ "ಚೆಂಡೆ" ಮತ್ತು "ಹುಲಿವೇಷ ಕುಣಿತ” ಗಳ ಮೂಲಕ ಸಾಂಪ್ರದಾಯಿಕ ಸ್ವಾಗತ

ಇದು ನವ ಮಂಗಳೂರು ಬಂದರಿನಲ್ಲಿರುವ ಬರ್ತ್ ನಂ.04 ರಲ್ಲಿ ಲಂಗರು ಹಾಕಿತ್ತು. ಹಡಗಿನ ಒಟ್ಟಾರೆ ಉದ್ದವು 238 ಮೀಟರ್ ಮತ್ತು 62,735 ಒಟ್ಟು ಟನ್ನೇಜ್ ಮತ್ತು 8.1 ಮೀಟರ್ ಕರಡು ಸಾಗಿಸುವ ಸಾಮರ್ಥ್ಯ ಹೊಂದಿದೆ. ಹಡಗಿನಿಂದ ಇಳಿಯುವಾಗ ಪ್ರಯಾಣಿಕರಿಗೆ "ಚೆಂಡೆ" ಮತ್ತು "ಹುಲಿವೇಷ ಕುಣಿತ” ಗಳ ಮೂಲಕ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.

ಪ್ರವಾಸಿಗರು ವಿವಿಧ ಕಲಾ ಪ್ರಕಾರಗಳನ್ನು ವೀಕ್ಷಿಸಿದರು ಮತ್ತು ತಮ್ಮ ಮಂಗಳೂರಿಗೆ ಭೇಟಿ ನೀಡಿದ ನೆನಪಿಗಾಗಿ ಫೋಟೋಗಳನ್ನು ತೆಗೆದರು. ಹಡಗಿನ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಆಹ್ಲಾದಕರ ಅನುಭವ ನೀಡಲು ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿತ್ತು. ವೈದ್ಯಕೀಯ ತಪಾಸಣೆ, ಬಹು ವಲಸೆ ಮತ್ತು ಕಸ್ಟಮ್ಸ್ ಕೌಂಟರ್​ಗಳು, ಮತ್ತು ಮಂಗಳೂರು ನಗರ ಮತ್ತು ಸುತ್ತಮುತ್ತ ಸಾರಿಗೆಗಾಗಿ ಬಸ್​​ಗಳು ಮತ್ತು ವಿಶೇಷ ಟ್ಯಾಕ್ಸಿಗಳು, ಸೆಲ್ಫಿ ಸ್ಟ್ಯಾಂಡ್, ಪ್ರವಾಸೋದ್ಯಮ ಸಚಿವಾಲಯ, ಆಯುಷ್ ಸಚಿವಾಲಯದಿಂದ ಧ್ಯಾನ ಕೇಂದ್ರ, ಇಂಟರ್​ ನ್ಯಾಷನಲ್​​ ಕ್ರೂಸ್ ಲಾಂಜ್​​​​​ನಲ್ಲಿ NMPA ಯಿಂದ ಉಚಿತ ವೈಫೈ ವ್ಯವಸ್ಥೆ ಮಾಡಲಾಗಿತ್ತು.

ಫ್ರೆಡ್ ಓಲ್ಸೆನ್ ಕ್ರೂಸ್ ಲೈನ್ಸ್ ಹಡಗು "MS BOLETTE"

ಪ್ರಯಾಣಿಕರ ಮನರಂಜಿಸಲು ನವ ಮಂಗಳೂರು ಬಂದರಿನಲ್ಲಿ ಸುಂದರ ಭರತನಾಟ್ಯ ಪ್ರದರ್ಶನ ಏರ್ಪಡಿಸಿದ್ದು, ಪ್ರಯಾಣಿಕರು ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು. ಪ್ರವಾಸಿಗರು ಕಾರ್ಕಳ ಗೋಮ್ಮಟೇಶ್ವರ ದೇವಸ್ಥಾನ, ಮೂಡಬಿದ್ರೆಯ ಸಾವಿರ ಕಂಬಗಳ ಬಸದಿ, ಸೋನ್ಸ್ ಫಾರ್ಮ್, ಅಚಲ್ ಕ್ಯಾಶ್ಯೂ ಫ್ಯಾಕ್ಟರಿ, ಕದ್ರಿ ಗೋಕರ್ಣನಾಥ ದೇವಸ್ಥಾನ, ಸೇಂಟ್​ ಅಲೋಶಿಯಸ್ ಚಾಪೆಲ್, ನಗರದ ಸ್ಥಳೀಯ ಮಾರುಕಟ್ಟೆಗಳಂತಹ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು. ಹಡಗು ತನ್ನ ಮುಂದಿನ ತಾಣವಾದ ಕೊಚ್ಚಿನ್ ಬಂದರಿಗೆ ಗುರುವಾರ ಸಂಜೆ 5 ಗಂಟೆಗೆ ಪ್ರಯಾಣ ಬೆಳೆಸಿತು.

ಇದನ್ನೂ ಓದಿ:ಈ‌ ಋತುವಿನ ಮೊದಲ ವಿದೇಶಿ ಪ್ರವಾಸಿ ಹಡಗು ಮಂಗಳೂರಿಗೆ ಆಗಮನ: ಸಾಂಪ್ರದಾಯಿಕ ಸ್ವಾಗತ

ಈ ತಿಂಗಳ ಮೊದಲ ವಿದೇಶಿ ಪ್ರವಾಸಿ ಹಡಗು 'ಸೆವೆನ್ ಸೀಸ್ ನ್ಯಾವಿಗೇಟರ್' ಡಿಸೆಂಬರ್​ 8 ರಂದು ನವ ಮಂಗಳೂರು ಬಂದರಿನ ಬರ್ತ್ ನಂ.04 ರಲ್ಲಿ ಲಂಗರು ಹಾಕಿತ್ತು. ಬಹಮಾಸ್ ಧ್ವಜದ ಈ ಹಡಗು ಸುಮಾರು 500 ಪ್ರಯಾಣಿಕರು ಮತ್ತು 350 ಸಿಬ್ಬಂದಿಯೊಂದಿಗೆ ಬಂದಿತ್ತು.

ABOUT THE AUTHOR

...view details