ಕರ್ನಾಟಕ

karnataka

By

Published : Aug 19, 2019, 10:42 PM IST

ETV Bharat / state

ನೆರೆ ಸಂತ್ರಸ್ತರಿಗೆ ಮಿಡಿದ ಮನ: ಈ ರಿಕ್ಷಾ ಚಾಲಕ ನೀಡಿದ ಹಣವೆಷ್ಟು ಗೊತ್ತಾ?

ನೆರೆಯಿಂದ ಸಾಕಷ್ಟು ಆಸ್ತಿ-ಪಾಸ್ತಿ ನಷ್ಟವಾದ ಹಿನ್ನೆಲೆಯಲ್ಲಿ ಹಲವಾರು ಮಂದಿ ದಾನಿಗಳು ತಮ್ಮ ಕೈಯಿಂದ ಆದಷ್ಟು ನೆರವು ನೀಡಿದ್ದನ್ನು ನೋಡಿದ್ದೇವೆ. ಬೆಳ್ತಂಗಡಿ ಗ್ರಾಮದಲ್ಲಾದ ನೆರೆ ಹಾನಿಗೆ ಇಲ್ಲಿನ ರಿಕ್ಷಾ ಚಾಲಕರೊಬ್ಬರು ಒಂದು ಲಕ್ಷ ರೂಪಾಯಿ ಹಣವನ್ನು ನೆರೆ ಪರಿಹಾರ ನಿಧಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಿಕ್ಷಾ ಚಾಲಕ

ಮಂಗಳೂರು: ಬೆಳ್ತಂಗಡಿ ಗ್ರಾಮದಲ್ಲಿ ನೆರೆ ಹಾನಿಗೆ ಇಲ್ಲಿನ ಸಹೃದಯಿ ರಿಕ್ಷಾ ಚಾಲಕರೊಬ್ಬರು 1 ಲಕ್ಷ ಹಣವನ್ನು ನೆರೆ ಪರಿಹಾರ ನಿಧಿಗೆ ನೀಡುವ ಮೂಲಕ ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ.

ಬೆಳ್ತಂಗಡಿಯ ಆಟೋ ಚಾಲಕ ನಿಡ್ಲೆ ಗ್ರಾಮದ ಮೇರ್ಲ ಮನೆಯ ಎಂ ಹೊನ್ನಪ್ಪ ಗೌಡ ಅವರು ಈ ಕೊಡುಗೆ ನೀಡಿದ್ದಾರೆ. ಆಗಸ್ಟ್​ 12 ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಚೇರಿಗೆ ಬಂದಿದ್ದ ಅವರು 1 ಲಕ್ಷ ರೂ. ಹಣವನ್ನು ತಂದು ನೀಡಿದ್ದಾರೆ. ಶಾಸಕರು ಆ ಸಂದರ್ಭದಲ್ಲಿ ಇರದ ಕಾರಣ ಶಾಸಕರ ಪರವಾಗಿ ಕಚೇರಿ ಸಹಾಯಕ ರವಿ ಮತ್ತು ನಂದಕುಮಾರ್ ಅವರು ಈ ಹಣವನ್ನು ಸ್ವೀಕರಿಸಿದ್ದರು‌.

ಹೊನ್ನಪ್ಪ ಗೌಡರ ಕೊಡುಗೆಯನ್ನು ಫೇಸ್​ಬುಕ್ ಪೋಸ್ಟ್ ಮಾಡಿರುವ ಶಾಸಕ ಹರೀಶ್ ಪೂಂಜಾ ಅವರು "ನಿಡ್ಲೆ ಗ್ರಾಮದ ಮೇರ್ಲ ಮನೆ ನಿವಾಸಿ ಹೊನ್ನಪ್ಪ ಗೌಡರು 1 ಲಕ್ಷ ರೂ. ದೇಣಿಗೆ ನೀಡಿದರು. ಶ್ರಮಿಕ ಕಚೇರಿಗೆ ಎಪ್ಪತ್ತೈದರ ಹರೆಯದ ಹಿರಿಯರೊಬ್ಬರು ಖಾಕಿ ಬಟ್ಟೆ ಧರಿಸಿಕೊಂಡು ಬಂದು, ಕಚೇರಿ ಸಿಬ್ಬಂದಿಯಲ್ಲಿ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆ ನೀಡುವ ಸಂಬಂಧ ಚರ್ಚಿಸಿ ಕೊನೆಗೆ ತಾನು ನೀಡುವ ದೇಣಿಗೆ ಸಂತ್ರಸ್ತರಿಗೆ ಉಪಯೋಗವಾಗಬೇಕು. ತನ್ನ ತಾಲೂಕಿಗೆ ಪ್ರಯೋಜನವಾಗಲೆಂಬ ಕಾಳಜಿಯಿಂದ ದೇಣಿಗೆ ನೀಡಿದರು. ಹೊನ್ನಪ್ಪ ಗೌಡರು ನಿಜವಾಗಿಯೂ ಹೆಸರಿಗೆ ತಕ್ಕಂತೆ ಹೊನ್ನಿನಂತವರು ಎಂದು ಶ್ಲಾಘಿಸಿದ್ದಾರೆ.

ABOUT THE AUTHOR

...view details