ಕರ್ನಾಟಕ

karnataka

By

Published : Nov 30, 2020, 7:15 PM IST

ETV Bharat / state

ಗ್ರಾಮಕ್ಕೊಂದು ಸ್ಮಶಾನ: ಬಂಟ್ವಾಳದ 16 ಗ್ರಾಪಂಗಳಲ್ಲಿ ಅಂತಿಮಗೊಳ್ಳದ ಜಾಗ

ಬಂಟ್ವಾಳದ 58 ಗ್ರಾಮ ಪಂಚಾಯಿತಿಗಳ ಪೈಕಿ ಕೇವಲ 14ರಲ್ಲಿ ಮಾತ್ರ ಸ್ಮಶಾನ ನಿರ್ಮಿಸಲಾಗಿದೆ. ಕೆಲವು ಗ್ರಾ.ಪಂ.ಗಳಲ್ಲಿ ನಿರ್ಮಾಣವಾಗುತ್ತಿದ್ದರೇ, ಇನ್ನೂ ಕೆಲವು ಕಡೆ ಸ್ಮಶಾನ ಮಾಡಲು ಜಾಗವನ್ನೇ ಗುರುತಿಸಲಾಗಿಲ್ಲ.

58 ಗ್ರಾ.ಪಂಚಾಯಿತಿಗಳ ಪೈಕಿ 14ರಲ್ಲಿ ಸ್ಮಶಾನ ನಿರ್ಮಾಣ
58 ಗ್ರಾ.ಪಂಚಾಯಿತಿಗಳ ಪೈಕಿ 14ರಲ್ಲಿ ಸ್ಮಶಾನ ನಿರ್ಮಾಣ

ಬಂಟ್ವಾಳ (ದ.ಕನ್ನಡ): ತಾಲೂಕಿನ ಒಟ್ಟು 58 ಗ್ರಾ.ಪಂಚಾಯಿತಿಗಳ ಪೈಕಿ 14ರಲ್ಲಿ ಸ್ಮಶಾನ ನಿರ್ಮಾಣವಾಗಿದ್ದರೆ, 13ರಲ್ಲಿ ಪ್ರಗತಿಯಲ್ಲಿದೆ. 15 ಗ್ರಾ.ಪಂಗಳಲ್ಲಿ ನಿವೇಶನ ಅಂತಿಮಗೊಳ್ಳುವ ಪ್ರಕ್ರಿಯೆಯಲ್ಲಿದ್ದರೆ, 16 ಗ್ರಾಪಂಗಳಲ್ಲಿ ಎಲ್ಲಿ ಸ್ಮಶಾನ ಮಾಡುವುದು ಎಂಬುದು ಇನ್ನೂ ಇತ್ಯರ್ಥವಾಗಿಲ್ಲ.

ಪ್ರತಿ ಗ್ರಾ.ಪಂ.ಗಳಲ್ಲಿ ಸ್ಮಶಾನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕೆಲವೊಂದು ಗ್ರಾ.ಪಂ.ಗಳಲ್ಲಿ ಈಗಾಗಲೇ ಸ್ಮಶಾನ ನಿರ್ಮಾಣ ಪೂರ್ಣಗೊಂಡಿದ್ದು, ಇನ್ನು ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ ಎನ್ನುತ್ತಾರೆ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ.

58 ಗ್ರಾ.ಪಂಚಾಯಿತಿಗಳ ಪೈಕಿ 14ರಲ್ಲಿ ಸ್ಮಶಾನ ನಿರ್ಮಾಣ

ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಎರಡೂ ಸ್ಮಶಾನಗಳು ನಿರ್ಮಾಣಗೊಂಡಿವೆ. ಬಡಬೆಳ್ಳೂರು ಗ್ರಾ.ಪಂ.ನಲ್ಲಿ ಒಂದು ಪೂರ್ಣಗೊಂಡಿದ್ದು, ತೆಂಕಬೆಳ್ಳೂರಿನಲ್ಲಿ ಸಮತಟ್ಟು ಮಾಡಲಾಗಿದೆ. ಬಾಳೆಪುಣಿ, ಗೋಳ್ತಮಜಲು, ಇಡ್ಕಿದು, ಕಡೇಶ್ವಾಲ್ಯ, ಕನ್ಯಾನ (ಭಾಗಶಃ ಪೂರ್ಣ), ಕರಿಯಂಗಳ, ಕಾವಳಮೂಡೂರು, ಕೇಪು, ಕುರ್ನಾಡು, ನರಿಕೊಂಬು, ಸಜೀಪನಡು, ಅಮ್ಮುಂಜೆ, ಸಜೀಪಪಡು ಗ್ರಾ.ಪಂ.ಗಳಲ್ಲಿ ಈಗಾಗಲೇ ಸ್ಮಶಾನಗಳು ನಿರ್ಮಾಣಗೊಂಡಿವೆ.

ಅಳಿಕೆ ಗ್ರಾ.ಪಂ.ನಲ್ಲಿ ಮೂರು ನಿವೇಶನಗಳನ್ನು ಗುರುತಿಸಲಾಗಿದ್ದು, ಭೀಮಾವರದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಬಡಗಕಜೆಕಾರು, ಇರಾ, ಕಾವಳಮೂಡೂರು, ಕೆದಿಲ (2 ಕಡೆ ಕಾಮಗಾರಿ ಪ್ರಗತಿ), ಕುಕ್ಕಿಪಾಡಿ, ಪಿಲಾತಬೆಟ್ಟು, ಉಳಿ, ಮಣಿನಾಲ್ಕೂರು, ಬೋಳಂತೂರು, ಅರಳ, ಸಾಲೆತ್ತೂರು, ಪೆರಾಜೆ ಗ್ರಾ.ಪಂ.ಗಳಲ್ಲಿ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ.

58 ಗ್ರಾ.ಪಂಚಾಯಿತಿಗಳ ಪೈಕಿ 14ರಲ್ಲಿ ಸ್ಮಶಾನ ನಿರ್ಮಾಣ

ಕರೋಪಾಡಿಯಲ್ಲಿ ನಿವೇಶನ ಅಂತಿಮಗೊಂಡಿದೆ. ಕಾವಳಪಡೂರಿನಲ್ಲಿ ಮೂರು ಕಡೆ ಸ್ಥಳ ಮಂಜೂರಾಗಿದೆ. ವೀರಕಂಭ, ಮಂಚಿಯಲ್ಲಿ 2 ಕಡೆ ಗಡಿಗುರುತು ಆಗಿ ಹಸ್ತಾಂತರ ಆಗಿರುತ್ತದೆ. ಮಾಣಿಯಲ್ಲಿ ಮಂಜೂರಾಗಿರುತ್ತದೆ. ಪುದು, ಸಂಗಬೆಟ್ಟು, ನರಿಂಗಾನ ನಿವೇಶನ ಗ್ರಾ.ಪಂ.ಸ್ವಾಧೀನದಲ್ಲಿದೆ. ನೆಟ್ಲಮುಡ್ನೂರು, ಮಾಣಿಲ, ನಾವೂರಿನಲ್ಲಿ ಗಡಿಗುರುತು ಬಾಕಿದೆ. ಸರಪಾಡಿ, ಫಜೀರು, ಪೆರುವಾಯಿಯಲ್ಲಿ ಪಹಣಿಯಲ್ಲಿ ದಾಖಲಾಗಿರುತ್ತದೆ. ಬಹುತೇಕ ಗ್ರಾ.ಪಂ.ಗಳಲ್ಲಿ ಸ್ಮಶಾನ ಜಾಗ ಅಂತಿಮಗೊಳ್ಳುವುದು ಬಾಕಿ ಇದೆ.

ABOUT THE AUTHOR

...view details