ಕರ್ನಾಟಕ

karnataka

ETV Bharat / state

ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ ಮೂಡಬಿದಿರೆ ಬಾಲಕಿ

9 ವರ್ಷದ ಬಾಲಕಿಯೋರ್ವಳು ಕ್ಯಾನ್ಸರ್ ಪೀಡಿತರಿಗಾಗಿ ಕೂದಲು ದಾನ ಮಾಡಿ ಆದರ್ಶ ಮೆರೆದಿದ್ದಾಳೆ.

9-year-old-girl-donates-hair-to-cancer-patients
ಕ್ಯಾನ್ಸರ್ ಪೀಡಿತರಿಗೆ ಕೂದಲು ದಾನ ಮಾಡಿದ ಮೂಡಬಿದಿರೆ ಬಾಲಕಿ

By

Published : May 4, 2022, 5:41 PM IST

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ 9 ವರ್ಷದ ಬಾಲಕಿಯೋರ್ವಳು ಕ್ಯಾನ್ಸರ್ ಪೀಡಿತರಿಗಾಗಿ ಕೂದಲು ದಾನ ಮಾಡಿ ಆದರ್ಶ ಮೆರೆದಿದ್ದಾಳೆ. ಮೂಡಬಿದಿರೆ ತಾಲೂಕಿನ ಪಡುಮಾರ್ನಾಡುವಿನ ಬಾಲಕಿ ತಾನಿಯಾ, ಕ್ಯಾನ್ಸರ್ ಪೀಡಿತರಿಗಾಗಿ ತನ್ನ ಕೇಶ ದಾನ ಮಾಡಿದ್ದಾಳೆ.

ಬಾಲಕಿಯ ನೀಳ ಕೂದಲಿನ 16 ಇಂಚಿನಷ್ಟು ಕೇಶವನ್ನು ಕ್ಯಾನ್ಸರ್ ಪೀಡಿತರಿಗಾಗಿ ದಾನ ಮಾಡಲಾಗಿದೆ. ತಾನಿಯಾ ಪಡುಮಾರ್ನಾಡಿನ ಸೇವಾ ಮಾಣಿಕ್ಯವೆಂದು ಬಿರುದು ಪಡೆದಿರುವ ಲೋಹಿತ್ ಎಸ್. ಹಾಗೂ ಟೆಸ್ಲಿನಾ ದಂಪತಿಯ ಪುತ್ರಿಯಾಗಿದ್ದಾಳೆ. ಹ್ಯುಮ್ಯಾನಿಟಿ ಸಂಸ್ಥೆಯ ರೋಶನ್ ಬೆಳ್ಮಣ್ ಅವರು ಕ್ಯಾನ್ಸರ್ ಪೀಡಿತರಿಗಾಗಿ ನಿರ್ಮಿಸಿರುವ ಕೇಶದಾನ ಮಹಾಯೋಜನೆಗೆ ಈ ಕೂದಲು ಅರ್ಪಿಸಲಾಗಿದೆ.

ಇತ್ತೀಚೆಗಷ್ಟೇ ತಾನಿಯಾ ಚಿಕ್ಕಮ್ಮ ಕ್ಯಾರಲ್ ಅವರು‌ ಕೂಡ ಕ್ಯಾನ್ಸರ್ ಪೀತರಿಗೆ ತಮ್ಮ ಕೂದಲು ನೀಡಿದ್ದರು. ಇದರಿಂದ ಪ್ರೇರಣೆಗೊಂಡ ತಾನಿಯಾ ಈ ನಿರ್ಧಾರ ಕೈಗೊಂಡಿದ್ದಾಳೆ.

ಇದನ್ನೂ ಓದಿ:ದಿನದ ಮಟ್ಟಿಗೆ ಅರಣ್ಯಾಧಿಕಾರಿಯಾಗಿ ಕ್ಯಾನ್ಸರ್‌ಪೀಡಿತ ಬಾಲಕಿಯ ಕನಸು ನನಸು!

For All Latest Updates

ABOUT THE AUTHOR

...view details