ಕರ್ನಾಟಕ

karnataka

ETV Bharat / state

ನೀರಿನ ಅಭಾವಕ್ಕೆ ಹೈರಾಣಾದ ಎಂಆರ್​​ಪಿಎಲ್.. ₹500 ಕೋಟಿ ನಷ್ಟ - mangalore news

ನೀರಿನ ಅಭಾವ ನೀಗಿಸಲು ಸಮುದ್ರದ ಉಪ್ಪು ನೀರು ಶುದ್ಧೀಕರಣ ಘಟಕ ನಿರ್ಮಾಣವಾಗುತ್ತಿದ್ದು, 2020ರ ಅಗಸ್ಟ್‌​ಗೆ ಸಿದ್ಧಗೊಳ್ಳಲಿದೆ.

ನೀರಿನ ಅಭಾವಕ್ಕೆ ಹೈರಾಣಾದ ಎಂಆರ್​​ಪಿಎಲ್: 500 ಕೋಟಿ ನಷ್ಟ

By

Published : Aug 3, 2019, 10:54 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆ ಕಾಲದಲ್ಲಿ ತಲೆದೋರಿದ್ದ ನೀರಿನ ಸಮಸ್ಯೆಯಿಂದ ಎಂಆರ್​​ಪಿಎಲ್​ ಈ ಬಾರಿ ₹500 ಕೋಟಿ ನಷ್ಟ ಅನುಭವಿಸಿದೆ.

ಮಂಗಳೂರಿನ ಎಂಆರ್​​ಪಿಎಲ್​ ಮುಖ್ಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್, ಮಂಗಳೂರಿನಲ್ಲಿ ಸುಮಾರು ಒಂದೂವರೆ ತಿಂಗಳುಗಳ ಕಾಲ ನೀರಿನ ಅಭಾವ ತಲೆದೋರಿದ್ದರಿಂದ ಎಂಆರ್​​ಪಿಎಲ್​ ಸ್ಥಾವರವನ್ನು ಮುಚ್ಚುವ ಪರಿಸ್ಥಿತಿ ತಲೆದೋರಿತ್ತು‌. ಇದರಿಂದ 0.42 ಬ್ಯಾರೆಲ್ ಬಿಲಿಯನ್ ಜಿಆರ್‌ಎಂ ಲಭಿಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ನಷ್ಟವುಂಟಾಗಿದೆ ಎಂದರು.

ಎಂಆರ್​​ಪಿಎಲ್‌ಗೆ ₹500 ಕೋಟಿ ನಷ್ಟ..

ಈ ಬಾರಿ ಕಾರ್ಯಾಚರಣೆಯಿಂದ 11, 200 ಕೋಟಿ ರೂ.ನಿವ್ವಳ ಆದಾಯ ಇದ್ದರೂ ತೆರಿಗೆ ರಹಿತವಾಗಿ ₹763 ಕೋಟಿ ನಷ್ಟವಾಗಿದ್ದು, ನಿವ್ವಳ ₹500 ಕೋಟಿ ನಷ್ಟವಾಗಿದೆ. ಮುಂದೆ ನೀರಿನ ಅಭಾವ ನೀಗಿಸಲು ಸಮುದ್ರದ ಉಪ್ಪು ನೀರು ಶುದ್ಧೀಕರಣ ಘಟಕ ನಿರ್ಮಾಣವಾಗುತ್ತಿದ್ದು, 2020ರ ಅಗಸ್ಟ್‌​ಗೆ ಸಿದ್ಧಗೊಳ್ಳಲಿದೆ. ಅದಕ್ಕೂ ಮುನ್ನ ತಾತ್ಕಾಲಿಕ ಶುದ್ಧೀಕರಣ ಘಟಕ ಮಾರ್ಚ್​ಗೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details