ಮಂಗಳೂರು:ದ.ಕ.ಜಿಲ್ಲೆಯಲ್ಲಿ ಇಂದು ಐವರು ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ಮೃತಪಟ್ಟವರ ಸಂಖ್ಯೆ 310ಕ್ಕೇರಿದೆ.
ದ.ಕ.ಜಿಲ್ಲೆಯಲ್ಲಿ ಇಂದು 193 ಮಂದಿಗೆ ಸೋಂಕು ದೃಢ: ಐವರು ಬಲಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಇಂದು ಐದು ಜನ ಬಲಿಯಾಗಿದ್ದು, ಹೊಸದಾಗಿ 193 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.
ಅಲ್ಲದೆ ಇಂದು ಮತ್ತೆ 193 ಮಂದಿಯಲ್ಲಿ ಸೋಂಕು ದೃಢಗೊಂಡಿದೆ. ಇದರಲ್ಲಿ ಮಂಗಳೂರಿನಲ್ಲಿ 130 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, ಬಂಟ್ವಾಳದಲ್ಲಿ 21, ಬೆಳ್ತಂಗಡಿಯಲ್ಲಿ 8, ಪುತ್ತೂರಿನಲ್ಲಿ 6, ಸುಳ್ಯದಲ್ಲಿ 19 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಹೊರ ಜಿಲ್ಲೆಯಿಂದ ಬಂದಿರುವ 9 ಮಂದಿಯಲ್ಲಿ ಸೋಂಕು ದೃಢಗೊಂಡಿದೆ. ಇಂದು ಇಲಿ(ILI) ಪ್ರಕರಣದಲ್ಲಿ 105 ಮಂದಿಗೆ ಸೋಂಕು ತಗುಲಿದ್ದರೆ, ಸಾರಿ( SARI)ಪ್ರಕರಣದಲ್ಲಿ 8 ಮಂದಿಗೆ, ಪ್ರಾಥಮಿಕ ಸಂಪರ್ಕದಿಂದ 45 ಮಂದಿಗೆ ಹಾಗೂ ಅಂತಾರಾಷ್ಟ್ರೀಯ ಪ್ರಯಾಣದಿಂದ ಓರ್ವರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. 34 ಮಂದಿಯ ಸೋಂಕಿನ ಮೂಲ ಇನ್ನೂ ಪತ್ತೆಯಾಗಬೇಕಿದೆ. ಇವರಲ್ಲಿ 97 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದು, 67 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ದ.ಕ.ಜಿಲ್ಲೆಯಲ್ಲಿ ಇಂದು ಸೋಂಕಿನಿಂದ ಗುಣಮುಖರಾಗಿ 164 ಮಂದಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 83,173 ಮಂದಿಗೆ ಕೊರೊನಾ ಸೋಂಕು ತಪಾಸಣೆ ಮಾಡಲಾಗಿದ್ದು, 72,843 ಮಂದಿಗೆ ನೆಗೆಟಿವ್ ಬಂದಿದೆ. 10,330 ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ 7,677 ಮಂದಿ ಗುಣಮುಖರಾಗಿದ್ದಾರೆ. 2,343 ಮಂದಿ ಸೋಂಕಿತರಾಗಿ ಕ್ವಾರೆಂಟೈನ್ನಲ್ಲಿದ್ದಾರೆ.