ಕರ್ನಾಟಕ

karnataka

By

Published : Jun 4, 2021, 10:10 PM IST

ETV Bharat / state

ದಕ್ಷಿಣ ಕನ್ನಡ ಜಿಲ್ಲೆಗೆ 13 ಸಾವಿರ ಡೋಸ್ ಕೋವ್ಯಾಕ್ಸಿನ್ ಸರಬರಾಜು : ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಲಭ್ಯವಿರುವ ಲಸಿಕೆ ಪೈಕಿ ಆನ್​ಲೈನ್ ನೋಂದಾಯಿತರಿಗೆ ಶೇ.75 ಲಸಿಕೆ ಲಭ್ಯವಾಗುತ್ತದೆ‌. ಉಳಿದ ಶೇ. 25 ಲಸಿಕೆ 70 ವರ್ಷ ಮೇಲ್ಪಟ್ಟರಿಗಾಗಿ ಮೀಸಲು..

dc
dc

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 13 ಸಾವಿರ ಡೋಸ್ ಕೋವ್ಯಾಕ್ಸಿನ್ ಲಸಿಕೆ ಸರಬರಾಜಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹೇಳಿದರು.

ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಹಾಗೂ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಜೂನ್ 6ರಿಂದ‌ ಲಸಿಕಾ ಶಿಬಿರ ಆರಂಭಿಸಿ ಪ್ರತಿ ದಿನ ನಡೆಸಲಾಗುತ್ತದೆ. ಫಸ್ಟ್ ಡೋಸ್ ಪಡೆದು 4 ರಿಂದ 6 ವಾರ ಪೂರ್ಣಗೊಳಿಸಿರುವ ಅರ್ಹರು ವ್ಯಾಕ್ಸಿನ್ ಪಡೆಯಬಹುದಾಗಿದೆ. ಅವರು ಜಿಲ್ಲೆಯ ಯಾವುದೇ ಆರೋಗ್ಯ ಕೇಂದ್ರಗಳಲ್ಲಿ ಯಾವುದೇ ದಿನದಂದು ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಲಸಿಕೆ ಪಡೆಯಬಹುದಾಗಿದೆ ಎಂದು ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

ಜಿಲ್ಲೆಯ ಕೊವಿಡ್ ಲಸಿಕಾ ಕೇಂದ್ರದಲ್ಲಿ ಜನರು ಮುಂಜಾನೆಯಿಂದಲೇ ಸಾಲಿನಲ್ಲಿ ನಿಂತು ಪ್ರಯಾಸ ಪಡುತ್ತಿರುವ ಬಗ್ಗೆ ಪ್ರತಿಕ್ರಿಸಿರುವ ಜಿಲ್ಲಾಧಿಕಾರಿ, ನಗರದ ಆರೋಗ್ಯ ಕೇಂದ್ರಗಳಾದ ಜೆಪ್ಪು, ಎಕ್ಕೂರು, ಪಡೀಲ್, ಶಕ್ತಿನಗರ, ಕುಂಜತ್ ಬೈಲ್, ಬಿಜೈ ಕಾಪಿಕಾಡ್ (ಲೇಡಿಹಿಲ್), ಕುಳಾಯಿ, ಕಸಬ ಬೆಂಗ್ರೆ, ಬಂದರ್, ಸುರತ್ಕಲ್‌ಗಳಲ್ಲಿ ಹಾಗೂ ನಗರ ಸಮುದಾಯ ಆರೋಗ್ಯ ಕೇಂದ್ರ ಉಳ್ಳಾಲ, ನಗರ ಆರೋಗ್ಯ ಕೇಂದ್ರ ಬಂಟ್ವಾಳ,ಪುತ್ತೂರು ಸೇರಿದಂತೆ ಆನ್‌ಲೈನ್ ನೋಂದಣಿ ಆರಂಭವಾಗಿದೆ.

ಇನ್ನು, 45 ವರ್ಷಕ್ಕಿಂತ ಮೇಲ್ಪಟ್ಟವರು ಮಂಗಳೂರು, ಬಂಟ್ವಾಳ, ಪುತ್ತೂರು ನಗರ ಆರೋಗ್ಯ ಕೇಂದ್ರದಲ್ಲಿ ಕೋವಿನ್ ಮೂಲಕ ನೋಂದಣಿ ಮಾಡಿಕೊಂಡವರಿಗೆ ಸ್ಥಳ, ಸಮಯ ನಿಗದಿ ಪಡಿಸಿ ಲಸಿಕೆ ಹಾಕಲು ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಲಭ್ಯವಿರುವ ಲಸಿಕೆ ಪೈಕಿ ಆನ್​ಲೈನ್ ನೋಂದಾಯಿತರಿಗೆ ಶೇ.75 ಲಸಿಕೆ ಲಭ್ಯವಾಗುತ್ತದೆ‌. ಉಳಿದ ಶೇ.25 ಲಸಿಕೆ 70 ವರ್ಷ ಮೇಲ್ಪಟ್ಟರಿಗಾಗಿ ಮೀಸಲು ಎಂದು ಡಾ. ರಾಜೇಂದ್ರ ಕೆ.ವಿ. ಮಾಹಿತಿ ನೀಡಿದರು.

For All Latest Updates

ABOUT THE AUTHOR

...view details