ಕರ್ನಾಟಕ

karnataka

ETV Bharat / state

ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಸ್ವಾಮಿ ಜಾತ್ರೆ ಸಂಪನ್ನ: ಈ ಬಾರಿ ಆದಾಯ ಕುಸಿತ - ನಾಯಕನಹಟ್ಟಿ ಜಾತ್ರೆ

ಈ ಬಾರಿ ನೆರೆಯ ಆಂಧ್ರ ಪ್ರದೇಶ ಸೇರಿದಂತೆ ಬಹಳಷ್ಟು ಜನರನ್ನು ಜಾತ್ರೆಗೆ ನಿರ್ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿದ್ದರಿಂದ ಕಳೆದ ವರ್ಷದ ಜಾತ್ರೆಗಿಂತ ಈ ಬಾರಿ 11.64 ಲಕ್ಷದಷ್ಟು ಆದಾಯ ಕುಸಿತವಾಗಿದೆ.

Nayakanahatti
Nayakanahatti

By

Published : Apr 10, 2021, 4:34 PM IST

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ನೆಲೆಸಿರುವ ಪವಾಡ ಪುರುಷ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ನಡೆದಿದ್ದು, ಜಾತ್ರೆಯ ಒಂದು ತಿಂಗಳ ಅವಧಿಯಲ್ಲಿ ಹೊರಮಠ ಒಳಮಠದಲ್ಲಿನ ಎರಡೂ ದೇವಾಲಯದ ಹುಂಡಿಗಳಲ್ಲಿ 18,66,422 ರೂ. ಸಂಗ್ರಹವಾಗಿದೆ.

ದಾಸೋಹದ ಹುಂಡಿಗೆ ಭಕ್ತರು 47,985 ರೂ.ಗಳನ್ನು ನೀಡಿದ್ದಾರೆ. ಜಾತ್ರೆಗಿಂತ ಒಂದು ತಿಂಗಳ ಮೊದಲು 28,43,843 ರೂ. ಸಂಗ್ರಹವಾಗಿತ್ತು.

ಈ ಬಾರಿ ನೆರೆಯ ಆಂಧ್ರ ಪ್ರದೇಶ ಸೇರಿದಂತೆ ಬಹಳಷ್ಟು ಜನರನ್ನು ಜಾತ್ರೆಗೆ ನಿರ್ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿದ್ದರಿಂದ ಕಳೆದ ವರ್ಷದ ಜಾತ್ರೆಗಿಂತ ಈ ಬಾರಿ 11.64 ಲಕ್ಷದಷ್ಟು ಆದಾಯ ಕುಸಿತವಾಗಿದೆ.

ಕಳೆದ ಬಾರಿ ಹೊರ ರಾಜ್ಯ ಜಿಲ್ಲೆಗಳಿಂದ ಬಂದ ಭಕ್ತರು ಹುಂಡಿಗೆ ಬಂಗಾರ, ಬೆಳ್ಳಿ ಸೇರಿದಂತೆ ಡಾಲರ್​ ಸಮೇತ ಹಾಕಲಾಗಿತ್ತು. ಹಣ ಎಣಿಕಾ ಕಾರ್ಯದ ನಂತರ ಹಣವನ್ನು ಕೆನರಾ ಬ್ಯಾಂಕ್​​ನಲ್ಲಿರುವ ದೇವಾಲಯದ ಖಾತೆಗೆ ಜಮಾ ಮಾಡಲಾಯಿತು.

ABOUT THE AUTHOR

...view details