ಚಿತ್ರದುರ್ಗ: ಸಿಎಂ ಯಡಿಯೂರಪ್ಪನವರದ್ದು ಎನ್ನಲಾಗುತ್ತಿರುವ ಆಡಿಯೋ ಫೇಕ್. ಅದನ್ನು ಯಾರು ಲೀಕ್ ಮಾಡಿದ್ದಾರೆ ಎಂದು ತಿಳಿದು ಬರಬೇಕಾಗಿದೆ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಯಡಿಯೂರಪ್ಪನವರ ಪರ ಬ್ಯಾಟ್ ಬೀಸಿದ್ದಾರೆ.
ವೈರಲ್ ಆಗಿರುವುದು ಫೇಕ್ ಆಡಿಯೋ: ಸಿಎಂ ಪರ ಬ್ಯಾಟ್ ಬೀಸಿದ ಶ್ರೀ ರಾಮುಲು - ಆರೋಗ್ಯ ಸಚಿವ ಶ್ರೀ ರಾಮುಲು ಯಡಿಯೂರಪ್ಪನವರ ಪರ
ಸಿಎಂ ಯಡಿಯೂರಪ್ಪನವರದ್ದು ಎನ್ನಲಾಗುತ್ತಿರುವ ಆಡಿಯೋ ಫೇಕ್ ಅದನ್ನು ಯಾರು ಲೀಕ್ ಮಾಡಿದ್ದಾರೆ ಎಂದು ತಿಳಿದು ಬರಬೇಕಾಗಿದೆ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಯಡಿಯೂರಪ್ಪನವರ ಪರ ಬ್ಯಾಟ್ ಬೀಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಸಿಎಂ ಯಡಿಯೂರಪ್ಪನವರನ್ನು ಕಡೆಗಣಿಸುವವರು ನಮ್ಮ ಪಕ್ಷದಲ್ಲಿ ಯಾರು ಇಲ್ಲ. ಅದ್ರೇ ಸಿಕ್ಕಿರುವುದು ಫೇಕ್ ಆಡಿಯೋವಾಗಿದ್ದು, ಸಿಎಂ ಮೇಲೆ ಸಾಕಷ್ಟು ಬಾರಿ ಷಡ್ಯಂತ್ರ ನಡೆದು ಬಂದಿದೆ. ಹೈಕಮಾಂಡ್ ತನಿಖೆ ನಡೆಸಿ ಒಂದು ನಿರ್ಧಾರಕ್ಕೆ ಬರಲಿದ್ದು, ಬಿಜೆಪಿ ಸಭೆಯಲ್ಲಿ ಪಾಲ್ಗೊಂಡಿದ್ದವರು ಯಾರು ಆಡಿಯೋ ಲೀಕ್ ಮಾಡಿದ್ದಾರೆಂದು ತಿಳಿಯಬೇಕಾಗಿದೆ ಎಂದರು.
ಇನ್ನೂ ಸವದಿ, ಕಟೀಲ್, ಬೊಮ್ಮಯಿ ಈ ಮೂವರಲ್ಲಿ ಒಬ್ಬರು ಆಡಿಯೊ ಲೀಕ್ ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ನಮ್ಮಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ವೈಯಕ್ತಿಕವಾಗಿ ಹೇಳ್ತಿನಿ ಅದು ಬೋಗಸ್ ಆಡಿಯೋ ಎಂದು ರಾಮುಲು ಸಮರ್ಥಿಸಿಕೊಂಡಿದ್ದಾರೆ.