ಕರ್ನಾಟಕ

karnataka

ETV Bharat / state

ಚಿತ್ರದುರ್ಗ: ಕಾಟಾಚಾರಕ್ಕೆ ಬೆಳೆ ವೀಕ್ಷಿಸಿದ ಕಂದಾಯ ಸಚಿವ - crop damage by heavy rain in chitradurga District

ರೈತರಿಂದಲೇ ಶೇಂಗಾ ಗಿಡ ಕಿತ್ತಿಸಿಕೊಂಡ ಕಂದಾಯ ಸಚಿವ ಆರ್​. ಅಶೋಕ್, ಜಮೀನಿನ ತುದಿಯಲ್ಲಿ ನಿಂತು ಬೆಳೆ ನಷ್ಟ ವೀಕ್ಷಿಸಿದರು. ಇತ್ತ ಸಮಸ್ಯೆಗಳನ್ನು ಹೇಳಿಕೊಂಡ ರೈತರಿಗೂ ಸರಿಯಾಗಿ ಉತ್ತರ ನೀಡಲಿಲ್ಲ.

Revenue Minister to conduct crop damage survey
ಬೆಳೆ ವೀಕ್ಷಿಸಿದ ಕಂದಾಯ ಸಚಿವ

By

Published : Jan 11, 2021, 4:04 PM IST

ಚಿತ್ರದುರ್ಗ:ಕಂದಾಯ ಸಚಿವ ಆರ್. ಅಶೋಕ ಅವರು ಒಂದೇ ಶೇಂಗಾ ಗಿಡ ಕೈಯಲ್ಲಿ ಹಿಡಿದು, ಸರಿಯಾಗಿ ರೈತರ ಕಷ್ಟ ಆಲಿಸದೆ ಕೇವಲ ಕಾಟಾಚಾರ ಎಂಬಂತೆ ಬೆಳೆ ಹಾನಿ ವೀಕ್ಷಿಸಿದರು.

ಇದನ್ನೂ ಓದಿ...ಸಿದ್ದರಾಮಯ್ಯ ಜ್ಯೋತಿಷ್ಯ ಹೇಳಲು ಶುರು ಮಾಡಿದ್ದಾರೆ: ಸಚಿವ ಆರ್.ಅಶೋಕ ಲೇವಡಿ

ಕಳೆದ ಎರಡು ದಿನಗಳ ಹಿಂದೆ ಸುರಿದ ಧಾರಾಕಾರ ಮಳೆ ಪರಿಣಾಮ ಹಿರಿಯೂರು ತಾಲೂಕಿನ ಬಬ್ಬೂರು ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಶೇಂಗಾ ಬೆಳೆಗಳು ಹಾಳಾಗಿದ್ದವು‌. ಸಚಿವರ ಬೆಳೆ ವೀಕ್ಷಣೆ ಸಂದರ್ಭದಲ್ಲಿ ರೈತರು ತಮ್ಮ ಅಹವಾಲು ಹೇಳಲು ಬಂದಿದ್ದರು.

ಬೆಳೆ ವೀಕ್ಷಿಸಿದ ಕಂದಾಯ ಸಚಿವ

ಆದರೆ, ಅವರ ಮನವಿಗಳಿಗೆ ಸರಿಯಾಗಿ ಸ್ಪಂದಿಸಲಿಲ್ಲ. ರೈತರಿಂದಲೇ ಶೇಂಗಾ ಗಿಡ ಕಿತ್ತಿಸಿಕೊಂಡ ಅಶೋಕ್, ಜಮೀನಿನ ತುದಿಯಲ್ಲಿ ನಿಂತು ಬೆಳೆ ನಷ್ಟ ಅಂದಾಜು ಮಾಡಿದರು. ಇದರಿಂದ ರೈತರು ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details