ಚಿತ್ರದುರ್ಗ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎನ್ಆರ್ಸಿ ಹಾಗೂ ಸಿಎಎ ಕಾಯ್ದೆಗಳನ್ನು ವಿರೋಧಿಸಿ ಜಿಲ್ಲಾ ಮುಸ್ಲಿಂ ಅಡ್ವೋಕೆಟ್ಸ್ ವೆಲ್ಫೆರ್ ಟ್ರಸ್ಟ್ ವತಿಯಿಂದ ವಕೀಲರು ಪ್ರತಿಭಟನೆ ನಡೆಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ: ವಕೀಲರ ಪ್ರತಿಭಟನೆ - Protest by lawyers chitradurga
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎನ್ಆರ್ಸಿ ಹಾಗೂ ಸಿಎಎ ಕಾಯ್ದೆಗಳನ್ನು ವಿರೋಧಿಸಿ ಜಿಲ್ಲಾ ಮುಸ್ಲಿಂ ಅಡ್ವೋಕೆಟ್ಸ್ ವೆಲ್ಫೆರ್ ಟ್ರಸ್ಟ್ನಿಂದ ವಕೀಲರು ಪ್ರತಿಭಟನೆ ನಡೆಸಿದರು.
ವಕೀಲರ ಪ್ರತಿಭಟನೆ
ನಗರದ ಒನಕೆ ಓಬವ್ವ ವೃತ್ತದಲ್ಲಿ ವಕೀಲರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ಮಾಡಿದರು. ಭಾರತ ಸಂವಿಧಾನದ 14 ಮತ್ತು 15 ನೇ ವಿಧಿಗಳು ಧರ್ಮ ಜಾತಿಗಳ ಆಧಾರದ ಮೇಲೆ ತಾರತಮ್ಯ ಮಾಡದಂತೆ ನಿರ್ಬಂಧಿಸುತ್ತದೆ. ಆದರೆ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆ ಅಸಂವಿಧಾನಿಕ ರೀತಿಯಲ್ಲಿದ್ದು, ಕೇವಲ ಒಂದು ಧರ್ಮಕ್ಕೆ ಅನ್ವಯಿಸುವಂತೆ ಮಾಡಿರುವುದನ್ನು ವಕೀಲರು ವಿರೋಧಿಸಿದ್ದಾರೆ.
ಇನ್ನು ಈ ಕಾಯ್ದೆಯನ್ನು ತಕ್ಷಣ ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಯಿತು.