ಕರ್ನಾಟಕ

karnataka

ETV Bharat / state

ಮಳೆರಾಯನ ಮುನಿಸಿನಿಂದ ಕಂಗೆಟ್ಟ ಕೋಟೆನಾಡಿನ ಜನ

ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿಯೂ ಬರ ಆವರಿಸಿದ್ದು, ಕೃಷಿ ಮಾಡಲಾಗದೇ ಅನ್ನದಾತರು ಕಂಗಾಲಾಗಿದ್ದಾರೆ.

ಮಳೆರಾಯನ ಮುನಿಸಿಂದ ಕಂಗೆಟ್ಟ ಕೋಟೆನಾಡ ಜನ

By

Published : Jul 9, 2019, 10:39 PM IST

ಚಿತ್ರದುರ್ಗ : ಕೋಟೆನಾಡಿನ ರೈತರು ಈ ಬಾರಿ ನಿರೀಕ್ಷೆಯಷ್ಟು ಮಳೆಯಾಗದ ಕಾರಣ ಹೈರಾಣಾಗಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳು ಬಂತದ್ರೆ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಬಿತ್ತನೆ ಕಾರ್ಯ ಜೋರಾಗಿರ್ತಿತ್ತು. ಆದ್ರೆ ಈ ಬಾರಿ ವರುಣನ ಹಾವು ಏಣಿ ಆಟದಿಂದ ಜೂನ್ ತಿಂಗಳು ಮುಗಿದರೂ ಬಿತ್ತನೆ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಸಕಾಲಕ್ಕೆ ಮಳೆರಾಯ ಕೃಪೆ ತೋರಿದ್ರೆ ಈ ಹೊತ್ತಿಗೆ ರೈತರ ಜಮೀನುಗಳಲ್ಲಿ ಈರುಳ್ಳಿ, ಮೆಕ್ಕೆಜೋಳ, ಶೇಂಗಾ, ಸೇರಿದಂತೆ ಅನೇಕ ಬೆಳೆ ಪೈರು ಮೊಳಕೆಯೊಡೆಯಬೇಕಿತ್ತು.

ಮಳೆರಾಯನ ಮುನಿಸಿಂದ ಕಂಗೆಟ್ಟ ಕೋಟೆನಾಡ ಜನ

ಇನ್ನೂ ಜಿಲ್ಲೆಯಲ್ಲಿ ಪ್ರತಿ ಮುಂಗಾರು ಹಂಗಾಮಿನಲ್ಲಿ ಒಟ್ಟು 3,58,340 ಹೆಕ್ಟೇರ್ ಬಿತ್ತನೆಯ ಗುರಿ ಇದ್ದು, ಜೂನ್ ಅಂತ್ಯದವರೆಗೆ 44,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಬೇಕಾಗಿತ್ತು. ಆದ್ರೆ ಕೇವಲ 14,000 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಒಟ್ಟು 11,000 ದಷ್ಟು ಬಿತ್ತನೆ ಬೀಜಗಳ ದಾಸ್ತಾನಿದ್ದು, ಈಗಾಗಲೇ 8,000 ದಷ್ಟು ಮಾರಾಟ ಆಗಿದೆಯಂತೆ. ರಸಗೊಬ್ಬರ 17,000 ಮೆಟ್ರಿಕ್ ಟನ್ ರಷ್ಟು ರಸಗೊಬ್ಬರ ದಾಸ್ತಾನಿದ್ದರೂ ಕೂಡ ಮಳೆ ಕೊರೆತಿಯಿಂದ ರೈತರು ಬಿತ್ತನೆ ಮಾಡಲು ಹಿಂಜರಿಯುತ್ತಿದ್ದಾರಂತೆ.

ಒಟ್ಟಾರೆ ಕೋಟೆನಾಡಿನ ರೈತರು ಕಳೆದ ಏಳೆಂಟು ವರ್ಷಗಳಿಂದ ವರುಣನ ಮುನಿಸಿಗೆ ರೋಸಿ ಹೊಗಿದ್ದಾರೆ. ಬಿತ್ತನೆ ಕಾರ್ಯವನ್ನ ಶುರು ಮಾಡಲಿಕ್ಕೆ ಮಳೆರಾಯ ಯಾವಾಗ ಆಗಮಿಸುತ್ತಾನೋ ಎಂದು ಕಾದು ಕುಳಿತಿದ್ದಾರೆ.ಅಷ್ಟೋ ಎಷ್ಟೋ ಮಳೆಗೆ ಬಿತ್ತನೆ ಕಾರ್ಯ ಆರಂಭಿಸಿದ ರೈತರಂತು ಕುಂತ್ರು ನಿಂತ್ರು ವರುಣ ದೇವನ ಜಪ ಮಾಡ್ತಿದ್ದಾರೆ. ಈ ವರ್ಷವಾದರೂ ವರುಣದೇವ ಕೃಪೆ ತೋರಿದ್ರೆ ಬರದಿಂದ ಬಸವಳಿದ ಜಿಲ್ಲೆಯ ಅನ್ನದಾತರು ನೆಮ್ಮದಿಯ ನಿಟ್ಟುಸಿರು ಬಿಟ್ಟಾರು.

ABOUT THE AUTHOR

...view details