ಕರ್ನಾಟಕ

karnataka

ETV Bharat / state

ಕುಡಿಯೋಕೆ ಎಣ್ಣೆ ಸಿಗಲಿಲ್ಲವೆಂದು ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ - ಚಿಕ್ಕೋಡಿ ಮದ್ಯಕ್ಕಾಗಿ ವ್ಯಕ್ತಿ ಆತ್ಮಹತ್ಯೆ

ಲಾಕ್​ಡೌನ್​ ನಿಂದಾಗಿ ಬಾರ್​ಗಳೆಲ್ಲವೂ ಇದೀಗ ಲಾಕ್​ ಆಗಿದ್ದು, ಕುಡುಕನೊಬ್ಬ ಕುಡಿಯೋಕೆ ಎಣ್ಣೆ ಸಿಗಲಿಲ್ಲವೆಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Man suicide for liquor
ಆತ್ಮಹತ್ಯೆ

By

Published : Apr 1, 2020, 2:44 PM IST

ಚಿಕ್ಕೋಡಿ: ಕುಡಿಯೋಕೆ ಎಣ್ಣೆ ಸಿಗಲಿಲ್ಲವೆಂದು ಬಾವಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೋಥಳಿ ಗ್ರಾಮದಲ್ಲಿ ನಡೆದಿದೆ.

ಕೋಥಳಿ ಗ್ರಾಮದ ಪೋಪಟ ಈರಪ್ಪ ಬಡಿಗೇರ (44) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇತ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದು. ಕುಡಿಯೋದಕ್ಕೆ ಎಣ್ಣೆ ಸಿಗಲಿಲ್ಲವೆಂದು ಗಲ್ಲಿ ಗಲ್ಲಿ ಸುತ್ತುತ್ತಿದ್ದ. ಇಂದು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕೋಥಳಿ ಗ್ರಾಮದ ಹೊರವಲಯದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸ್ಥಳಕ್ಕೆ ಕಡಕಲಾಟ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಕಡಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details