ಚಿತ್ರದುರ್ಗ: ವಿಶೇಷ ಚೇತನ ಮಗನಿಗೆ ಶಿಕ್ಷಣ ಕೊಡಿಸಲು ಪಣ ತೊಟ್ಟಾ ತಾಯಿಯೊಬ್ಬರ ಗೋಳಿನ ಬಗ್ಗೆ ಈಟಿವಿ ಭಾರತ ವರದಿಯನ್ನು ಗಮನಿಸಿದ ಶಿಕ್ಷಣ ಇಲಾಖೆ ಸಕಲ ಸೌಲಭ್ಯ ನೀಡಿಲು ಮುಂದಾಗಿದೆ.
ವಿಶೇಷ ಚೇತನ ಹುಡುಗನಿಗೆ ಸೌಲಭ್ಯ ಒದಗಿಸಲು ಕೊನೆಗೂ ಒಪ್ಪಿದ ಬಿಇಒ..! ಇದು ಈಟಿವಿ ಭಾರತ ಇಂಪ್ಯಾಕ್ಟ್
ಚಿತ್ರದುರ್ಗದಲ್ಲಿ ವಿಶೇಷ ಚೇತನ ಮಗನಿಗೆ ಶಿಕ್ಷಣ ಕೊಡಿಸಲು ಪಣ ತೊಟ್ಟಾ ತಾಯಿಯೊಬ್ಬರ ಗೋಳಿನ ಬಗ್ಗೆ ಈಟಿವಿ ಭಾರತ ವರದಿಯನ್ನು ಗಮನಿಸಿದ ಶಿಕ್ಷಣ ಇಲಾಖೆ ಸಕಲ ಸೌಲಭ್ಯ ನೀಡಿಲು ಸಿಇಒ ಮುಂದಾಗಿದ್ದಾರೆ.
ದಿನ ನಿತ್ಯ ಮೂರ್ನಾಲ್ಕು ಕಿ.ಮೀ ಕ್ರಮಿಸಿ ಮಗನನ್ನು ಹೊತ್ತು ಶಾಲೆಗೆ ತಲುಪಿಸುತ್ತಿದ್ದ, ಚಳ್ಳಕೆರೆ ತಾಲೂಕಿನ ರಂಗವ್ವನಹಳ್ಳಿಯ ಜಯಲಕ್ಷ್ಮಿಯವರ ಬಗ್ಗೆ ಈಟಿವಿ ಭಾರತ ವರದಿಯೊಂದನ್ನು ನೀಡಿತ್ತು. ವರದಿ ಆಧರಿಸಿ ಘಟನಾಸ್ಥಳಕ್ಕೆ ಆಗಮಿಸಿದ ಬಿಇಓಸಿ.ಎಸ್ ವೆಂಕಟೇಶಪ್ಪಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಂಗವ್ವನಹಳ್ಳಿಯಿಂದ ಮೀರಾಸಾಬಿಹಳ್ಳಿಗೆ ಆಟೋ, ಬಸ್ಸಿಲ್ಲವೆಂಬ ನೆಪ ಹೇಳಿ ತನ್ನ ಮಗನ ವಿದ್ಯಾಭ್ಯಾಸ ಮೊಟಕುಗೊಳಿಸದ ತಾಯಿ ಜಯಲಕ್ಷ್ಮಿ, ತಮ್ಮ ವಿಶೇಷ ಚೇತನ ಮಗನಾದ ರಾಜೇಶ್ ಬಾಬುನನ್ನು ನಿತ್ಯ ತನ್ನಹೆಗಲ ಮೇಲೆ ನಾಲ್ಕು ಕಿಲೋಮೀಟರ್ಗಳಷ್ಟು ದೂರ ಹೊತ್ತು ಮೀರಾಸಾಬಿಹಳ್ಳಿಯಲ್ಲಿರುವ ರಾಣಿಕೆರೆ ಪ್ರೌಢಾ ಶಾಲೆಗೆ ತಂದು ಓದಿಸುತ್ತಿದ್ದ ವರದಿ ಈಟಿವಿ ಭಾರತ ಮಾಡಿತ್ತು. ಈ ವರದಿಗೆ ಇದೀಗ ಶಿಕ್ಷಣ ಇಲಾಖೆ ಸ್ಪಂದಿಸಿದೆ.