ಚಿತ್ರದುರ್ಗ: ಭಾರತ ಲಾಕ್ ಡೌನ್ ಆಗಿರುವ ಹಿನ್ನಲೆ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕಟಾವಿಗೆ ಬಂದ ಕರ್ಬೂಜ ಹಣ್ಣುಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲಾಗದೆ ಹಾನಿಯಾಗಿ ಜಮೀನಿನಲ್ಲೇ ಕೊಳೆಯುವಂತ ಪರಿಸ್ಥಿತಿ ಚಳ್ಳಕೆರೆಯ ತಾಲೂಕಲ್ಲಿ ಕಂಡುಬಂದಿದೆ.
ರೈತರ ಮೇಲೆರೆಗಿದ ಕೊರೊನಾ ಮಹಾಮಾರಿ: ಮಾರುಕಟ್ಟೆಗೆ ಕೊಂಡೊಯ್ಯಲಾಗದೆ ಟನ್ಗಟ್ಟಲೇ ಕರ್ಬೂಜ ಹಾಳು
ಚಿತ್ರದುರ್ಗದಲ್ಲಿ ಕಟಾವಿಗೆ ಬಂದ 40 ಟನ್ ಕರ್ಬೂಜವನ್ನು ಮಾರುಕಟ್ಟೆಗೆ ಸಾಗಿಸಲಾಗದೆ ರೈತ ನಷ್ಟ ಅನುಭವಿಸಿದ್ದಾನೆ.
ಚಿತ್ರದುರ್ಗ
ಹುಲಿಕುಂಟೆ ಗ್ರಾಮದ ರೈತ ಎಂ. ಜಯಣ್ಣ 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಸುಮಾರು 40 ಟನ್ ಕರ್ಬೂಜ ಹಾನಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ನಿರ್ಮಾಣವಾಗಿದೆ. ಮಾತ್ರವಲ್ಲ, ಹಾಲಗೊಂಡನಹಳ್ಳಿಯಲ್ಲಿ ರೈತ ತಿಪ್ಪೇಸ್ವಾಮಿ ಎಂಬುವರು ಕೂಡ 4 ಎಕರೆಯಲ್ಲಿ ಸುಮಾರು 50 ಟನ್ ಕರ್ಬೂಜ ಕೂಡ ಹಾನಿಯಾಗಿದೆ.
ಇದೀಗ ಹಾನಿಯಾಗಿರುವ ಬೆಳೆಗೆ ಸರ್ಕಾರ ಪರಿಹಾರ ಕೊಡಬೇಕೆಂದು ನೊಂದ ರೈತರು ಆಗ್ರಹಿಸಿದ್ದಾರೆ.