ಕರ್ನಾಟಕ

karnataka

ETV Bharat / state

ಲೈಂಗಿಕ ದೌರ್ಜನ್ಯ ಆರೋಪ.. ಮುರುಘಾಮಠದ ಆಡಳಿತಾಧಿಕಾರಿಗೆ ಜಾಮೀನು - ಮುರುಘಾಮಠದ ಆಡಳಿತಾಧಿಕಾರಿ ಬಸವರಾಜನ್

ಮುರುಘಾಮಠದ ಆಡಳಿತಾಧಿಕಾರಿ ಬಸವರಾಜನ್​ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮುರುಘಾಮಠದ ಆಡಳಿತಾಧಿಕಾರಿ ಎಸ್​.ಕೆ. ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಮುರುಘಾಮಠದ ಆಡಳಿತಾಧಿಕಾರಿಗೆ ಜಾಮೀನು ಮಂಜೂರು
ಮುರುಘಾಮಠದ ಆಡಳಿತಾಧಿಕಾರಿಗೆ ಜಾಮೀನು ಮಂಜೂರು

By

Published : Sep 1, 2022, 7:24 PM IST

Updated : Sep 1, 2022, 10:05 PM IST

ಚಿತ್ರದುರ್ಗ:ಹಾಸ್ಟೆಲ್ ವಾರ್ಡನ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಮುರುಘಾಮಠದ ಆಡಳಿತಾಧಿಕಾರಿ ಎಸ್​.ಕೆ. ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯ ಅವರಿಗೆ 1ನೇ ಜೆಎಂಎಫ್​ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಮಹಿಳಾ ನಿಲಯ ಪಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಸವರಾಜನ್ ಮತ್ತು ಅವರ ಪತ್ನಿ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬಸವರಾಜನ್ ಪರವಾಗಿ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ, ಜಾಮೀನು ನೀಡಿದೆ. ವಿಚಾರಣೆ ವೇಳೆ ಕೋರ್ಟ್​ನಲ್ಲಿ ಬಸವರಾಜನ್ ಮತ್ತು ಸೌಭಾಗ್ಯ ಅವರು ಹಾಜರಿದ್ದರು. ನಾಗರಾಜ್ ಎಂಬುವರು ಇವರಿಗೆ ಶ್ಯೂರಿಟಿ ನೀಡಿದ್ದಾರೆ.

ಮುರುಘಾಮಠದ ಆಡಳಿತಾಧಿಕಾರಿಗೆ ಜಾಮೀನು

ಜಾಮೀನು ಮಂಜೂರಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜನ್, ನನ್ನ ವಿರುದ್ಧದ ಆರೋಪಿಗಳೆಲ್ಲವೂ ಸುಳ್ಳು. ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಿದ್ದಾರೆ ಎಂದು ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದರು.

(ಇದನ್ನೂ ಓದಿ: ಮುರುಘಾಮಠದ ಆಡಳಿತಾಧಿಕಾರಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಪ್ರಕರಣ ದಾಖಲು)

Last Updated : Sep 1, 2022, 10:05 PM IST

ABOUT THE AUTHOR

...view details