ಚಿತ್ರದುರ್ಗ: ಭೋವಿ ಸಮುದಾಯದ ಪ್ರಾತಿನಿಧ್ಯಕ್ಕಾಗಿ ಅಸಮಾಧಾನ ಸಹಜ, ಎಲ್ಲವನ್ನು ಸರಿಪಡಿಸಿಕೊಂಡು ಮುಂದೆ ಸಾಗುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ಆನೇಕಲ್ ನಾರಾಯಣ ಸ್ವಾಮಿ ಹೇಳಿದರು.
ಅಸಮಾಧಾನ ಸಹಜ, ಸರಿಪಡಿಸಿಕೊಂಡು ಮುಂದೆ ಸಾಗುತ್ತೇವೆ : ಬಿಜೆಪಿ ಅಭ್ಯರ್ಥಿ - ಸಹಜ
ಸಮಾಜ ಕಲ್ಯಾಣ ಸಚಿವನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಚಿತ್ರದುರ್ಗ ನನಗೆ ಹೊಸದಲ್ಲ. ಇಲ್ಲಿಯ ಪ್ರತಿ ಕಾರ್ಯಕರ್ತರು ನಾರಾಯಣ ಸ್ವಾಮಿ, ನರೇಂದ್ರ ಮೋದಿ ಎನ್ನುತ್ತಾರೆ. ನಾನೊಬ್ಬ ಪಕ್ಷದ ಕಾರ್ಯಕರ್ತ.
ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಅವರು, ಸಮಾಜ ಕಲ್ಯಾಣ ಸಚಿವನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಚಿತ್ರದುರ್ಗ ನನಗೆ ಹೊಸದಲ್ಲ. ಇಲ್ಲಿಯ ಪ್ರತಿ ಕಾರ್ಯಕರ್ತರು ನಾರಾಯಣ ಸ್ವಾಮಿ, ನರೇಂದ್ರ ಮೋದಿ ಎನ್ನುತ್ತಾರೆ. ನಾನೊಬ್ಬ ಪಕ್ಷದ ಕಾರ್ಯಕರ್ತ. ಪಕ್ಷ ಗುರುತಿಸಿ ನನಗೆ ಟಿಕೆಟ್ ನೀಡಿದೆ. ಇಲ್ಲಿನ ಕಾರ್ಯಕರ್ತರು ಸಹಕಾರ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದಾಶಿವ ಆಯೋಗದ ವರದಿ ಸರ್ಕಾರದ ಪ್ರತಿನಿಧಿಯಾಗಿ ತೆಗೆದುಕೊಂಡ ತೀರ್ಮಾನ. ಅದನ್ನು ವಿದ್ಯಾವಂತರಾದವರು ವಿರೋಧಿಸಲ್ಲ. ಯಾರನ್ನೂ ಪರಿಶಿಷ್ಟ ವರ್ಗದಿಂದ ಹೊರಗಿಡುವ ಹುನ್ನಾರ ನಡೆದಿಲ್ಲ ಎಂದು ಇದೇ ವೇಳೆ ತಿಳಿಸಿದರು.