ಕರ್ನಾಟಕ

karnataka

ETV Bharat / state

ಚಿತ್ರದುರ್ಗ ರೈತರಿಗೆ ಬೇಸರ ತಂದ ಕೃಷಿ ಸಚಿವರ 'ಹೆದ್ದಾರಿ ಬೆಳೆ ಸಮೀಕ್ಷೆ' - ಕೃಷಿ ಸಚಿವ ಬಿಸಿ ಪಾಟೀಲ್ ಬೆಳೆ ಸಮೀಕ್ಷೆ

ಬೆಳೆ ಸಮೀಕ್ಷೆಗೆಂದು ಬಂದಿದ್ದ ಕೃಷಿ ಸಚಿವ ಬಿ. ಸಿ. ಪಾಟೀಲ್​ ಅವರು, ಹೆದ್ದಾರಿಯ ಪಕ್ಕದಲ್ಲಿದ್ದ ಜಮೀನುಗಳಿಗಷ್ಟೇ ಭೇಟಿ ನೀಡಿ ಸಮೀಕ್ಷೆ ಮಾಡಿದರು. ಇದರಿಂದಾಗಿ ತಮ್ಮ ಜಮೀನುಗಳಿಗೂ ಸಚಿವರು ಬರುತ್ತಾರೆ ಎಂದು ಕಾಯ್ದು ಕುಳಿತಿದ್ದ ರೈತರಿಗೆ ನಿರಾಸೆ ಉಂಟಾಯಿತು.

agricluture-minister-bc-patil-crop-survey-in-chitradurga
ಬೆಳೆ ಸಮೀಕ್ಷೆ

By

Published : Aug 17, 2021, 5:24 PM IST

ಚಿತ್ರದುರ್ಗ: ಕೃಷಿ ಸಚಿವ ಬಿ.ಸಿ. ಪಾಟೀಲ್​ ಬೆಳೆ ಸಮೀಕ್ಷೆ ಕೇವಲ ಹೆದ್ದಾರಿ ಬದಿಯಲ್ಲಿನ ಜಮೀನುಗಳಿಗೆ ಮಾತ್ರ ಸೀಮಿತವಾಗಿತ್ತು. ಬಂದ ಪುಟ್ಟ ಹೋದ ಪುಟ್ಟ ಎಂಬ ಲೆಕ್ಕಾಚಾರದ ಸಮೀಕ್ಷೆ ರೈತರಿಗೆ ಬೇಸರ ತರಿಸಿತು. ಅಲ್ಲದೇ, ನಾನೇನು ಪಂಜಾಬ್​​​​​ನಲ್ಲಿ ಹುಟ್ಟಿಲ್ಲ, ನಾನು ಕೂಡಾ ರೈತರನ ಮಗ ಎಂಬ ಬೇಜವಾಬ್ದಾರಿ ಹೇಳಿಕೆ ರೈತರ ಅಸಮಾಧಾನಕ್ಕೆ ಕಾರಣವಾಯಿತು.

ಚಿತ್ರದುರ್ಗ ರೈತರಿಗೆ ಬೇಸರ ತಂದ ಕೃಷಿ ಸಚಿವರ 'ಹೆದ್ದಾರಿ ಬೆಳೆ ಸಮೀಕ್ಷೆ'

ಜಿಲ್ಲೆ ಹಿರಿಯೂರು ತಾಲೂಕಿನ ಕೆ.ಆರ್ ಹಳ್ಳಿ ಬಳಿಯ ಜಮೀನುಗಳಿಗೆ ಭೇಟಿ ನೀಡಿ ಸಚಿವರು, ಹೆದ್ದಾರಿ ಬದಿಯಲ್ಲಿದ್ದ ಹೊಲಗಳ ಬೆಳೆ ಸಮೀಕ್ಷೆಯನ್ನಷ್ಟೇ ಮಾಡಿದರು. ಇದರಿಂದ ತಮ್ಮ ಹೊಲದ ಪರಿಸ್ಥಿತಿಯನ್ನು ನೋಡಲು ಸಚಿವರು ಬರ್ತಾರೆ ಅಂತ ಕಾಯ್ದು ಕುಳಿತಿದ್ದ ರೈತರಿಗೆ ನಿರಾಸೆ ಉಂಟಾಯಿತು.

ಆನಂದ್​ ಸಿಂಗ್​ ಮುನಿಸು ಸರಿಯಾಗುತ್ತದೆ: ಈ ವೇಳೆ, ಸಚಿವ ಆನಂದ್ ಸಿಂಗ್ ಮುನಿಸು‌ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಿ. ಸಿ. ಪಾಟೀಲ್​, ಆನಂದ್ ಸಿಂಗ್ ವಿಚಾರ ಇವತ್ತಲ್ಲ ನಾಳೆ ಸರಿ ಹೋಗುತ್ತದೆ. ಬಾಂಬೆ ಟೀಂ ಇಲ್ಲ ಯಾವ್ ಟೀಂ ಇಲ್ಲ, ಆನಂದ್ ಸಿಂಗ್ ಯಲ್ಲಾಪುರಕ್ಕೆ ಹೋಗಿದ್ದಾರೆ ಅಷ್ಟೇ. ಸಿಎಂ ಬಳಿ ಅವರ ಅಸಮಾಧಾನ ಹೇಳಿದ್ದಾರೆ. ಅದನ್ನ ಪಕ್ಷದ ವರಿಷ್ಠರು ಸರಿ ಮಾಡುತ್ತಾರೆ ಎಂದರು.

ಸರ್ಕಾರದ ಕೆಲಸ ದೇವರ ಕೆಲಸ: ಆ ಇಲಾಖೆ ಹೆಚ್ಚು, ಈ ಇಲಾಖೆ ಹೆಚ್ಚು ಎಂದು ಮಾಡೋಕೆ ಆಗಲ್ಲ. ಯಾವುದೇ ಇಲಾಖೆ ಇದ್ದರೂ ಸರ್ಕಾರದ ಇಲಾಖೆ, ಸರ್ಕಾರದ ಕೆಲಸ ದೇವರ ಕೆಲಸ ಎಂದು ನಂಬಿರುವನು ನಾನು. ಮಿತ್ರ ಮಂಡಳಿ ಇಬ್ಭಾಗ ಎಂದರೆ ಅವರನ್ನೆಲ್ಲ ಬೆಳೆ ಸಮೀಕ್ಷೆಗೆ ಕರೆದುಕೊಂಡು ಬರಬೇಕಾ ಎಂದು ಪ್ರಶ್ನಿಸಿದರು.

ನಾವೆಲ್ಲ ಒಗ್ಗಟ್ಟಾಗಿ ಇದ್ದೇವೆ:ನಾಲ್ಕು ಜನ ಸೇರಿದರೆ ಏನೋ ನಡೆಯುತ್ತದೆ ಎನ್ನುತ್ತಿರಿ. ಒಂದು ಮನೆಯಲ್ಲಿ ಎಲ್ಲವೂ ಸರಿ ಇರಲ್ಲ, ತಾಯಿ - ತಂದೆ ಸರಿ ಮಾಡುತ್ತಾರೆ. ಅದೇ ರೀತಿ ಪಕ್ಷದಲ್ಲಿ ಎಲ್ಲವೂ ಸರಿ ಹೋಗುತ್ತದೆ ಎನ್ನುವ ಆಶಭಾವನೆ ಇದೆ. ಸರ್ಕಾರ ತೆಗೆದ ಬಳಿಕ ತಾನೆ ಹೊಸ ಸರ್ಕಾರ ರಚನೆ ಆಗಿರೋದು. ನಾವೆಲ್ಲರೂ ಕೂಡ ಒಟ್ಟಾಗಿ ಇದ್ದೇವೆ, ಅದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.

ಕಾಂಗ್ರೆಸ್​​ನವರು ಬಾರ್​ಗೆ ಹೋಗಲ್ವಾ:ಇನ್ನೂ ಇಂದಿರಾ ಕ್ಯಾಂಟೀನ್​ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಪಾಟೀಲ್​, ಕಾಂಗ್ರೆಸ್​ನವರು ಬಾರ್​ಗೆ ಹೋಗೋದೇ ಇಲ್ವಾ ಹಾಗಾದ್ರೆ, ಕಾಂಗ್ರೆಸ್​​ನವರಿಗೆ ಯಾರಿಗೂ ಬಾರ್ ಗೊತ್ತಿಲ್ವಾ ..? ಹಸಿವಿಗೂ ಇಂದಿರಾ ಗಾಂಧಿಯವರಿಗೆ ಸಂಬಂಧ ನಾ..? ಇಂದಿರಾಗಾಂಧಿ ಬಗ್ಗೆ ಗೌರವ ಇದೆ, ಈ ರೀತಿ ಹೋಲಿಕೆ ಮಾಜಿ ಸಿಎಂ ಘನತೆಗೆ ಸರಿಯಲ್ಲ ಎಂದರು.

ಮದ್ದಾನೆಗಳ ಗುದ್ದಾಟಕ್ಕೆ ನಾವ್ಯಾಕೆ: ಸಿಟಿ ರವಿ- ಕಾಂಗ್ರೆಸ್ ಮುಖಂಡರ ನಡುವಿನ ವಾಕ್ಸಮರಕ್ಕೆ ಡಿವಿಜಿ ಮಾತು ನೆನಪಿಸಿದರು. ಮದ್ದಾನೆಗಳು ಗುದ್ದಾಡುವಾಗ, ಗುಬ್ಬಿ ಹೋಗಿ ಬುದ್ದಿ ಹೇಳುವುದು ಪೆದ್ದನಲ್ಲವೇನೆ. ಮದ್ದಾನೆಗಳು ಹುಕ್ಕಾ ಬಾರ್, ಆ ಬಾರ್ ಎಂದು ಗುದ್ದಾಡಲಿ. ನಾವು ನೀವು ರೈತರ ಬಗ್ಗೆ ಗುದ್ದಾಡೋಣ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿ, ಪ್ರತಿಕ್ರಿಯೆಗೆ ಬ್ರೇಕ್​ ಹಾಕಿ ಮುಂದೆ ಸಾಗಿದರು.

ABOUT THE AUTHOR

...view details