ಚಿಕ್ಕಮಗಳೂರು:ಮದ್ಯಕ್ಕಾಗಿ ಗಂಡ-ಹೆಂಡತಿ ನಡು ರಸ್ತೆಯಲ್ಲೇ ಜಗಳ ಮಾಡಿಕೊಂಡು ಸಾರ್ವಜನಿಕರಿಗೆ ಪುಕ್ಸಟ್ಟೆ ಮನರಂಜನೆ ನೀಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
'ಎಣ್ಣೆ'ಯಾಟ... ಕೊನೆಯ ಪೆಗ್ಗಾಗಿ ನಡು ರಸ್ತೆಯಲ್ಲಿ ಗಂಡ-ಹೆಂಡತಿಯ ರಂಪಾಟ - ಗಂಡ-ಹೆಂಡತಿ
ಎಣ್ಣೆ ನಶೆಯಲ್ಲಿದ್ದ ಗಂಡ-ಹೆಂಡತಿ ಚಪ್ಪಲಿ ಹಾಗೂ ಕಲ್ಲಿನಲ್ಲಿ ಹೊಡೆದಾಡಿಕೊಂಡಿದ್ದಾರೆ. ದಂಪತಿಗಳ ಜಗಳ ಕಂಡು ಬಿಡಿಸಲು ಯತ್ನಿಸಿದ ಸ್ಥಳೀಯರಿಗೂ ಕೇರ್ ಮಾಡದೇ ಕಿತ್ತಾಡಿಕೊಂಡಿದ್ದಾರೆ. ಗಂಡ ಹೆಂಡತಿಯ ಈ ಎಣ್ಣೆ ಫೈಟ್ ನೋಡುಗರಿಗೆ ಫುಲ್ ಮನರಂಜನೆ ನೀಡಿದೆ.
ಮದ್ಯಕ್ಕಾಗಿ ಗಂಡ-ಹೆಂಡತಿಯ ಬೀದಿ ರಂಪಾಟ
ಚಿಕ್ಕಮಗಳೂರು ನಗರದ ಐಜಿ ರಸ್ತೆ ಹಿಂಭಾಗದ ಬಾರ್ ಲೈನ್ ರೋಡ್ ಗಲ್ಲಿಯಲ್ಲಿ ಕುಡಿದು ತೂರಾಡುತ್ತಿದ್ದ ದಂಪತಿಗಳು ಬಾಟಲಿಯ ಕೊನೆಯ ಪೆಗ್ ನನಗೆ ಬೇಕು ನನಗೆ ಬೇಕು ಎಂದು ಕಿತ್ತಾಡಿಕೊಂಡಿದ್ದಾರೆ.
ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಎಣ್ಣೆ ನಶೆಯಲ್ಲಿದ್ದ ಇಬ್ಬರು ಚಪ್ಪಲಿ ಹಾಗೂ ಕಲ್ಲಿನಲ್ಲಿ ಹೊಡೆದಾಡಿಕೊಂಡಿದ್ದಾರೆ. ದಂಪತಿಗಳ ಜಗಳ ಕಂಡು ಬಿಡಿಸಲು ಯತ್ನಿಸಿದ ಸ್ಥಳೀಯರಿಗೂ ಕೇರ್ ಮಾಡದೇ ಕಿತ್ತಾಡಿಕೊಂಡಿದ್ದಾರೆ. ಗಂಡ ಹೆಂಡತಿಯ ಈ ಎಣ್ಣೆ ಫೈಟ್ ಮಾತ್ರ ನೋಡುಗರಿಗೆ ಫುಲ್ ಮನರಂಜನೆ ನೀಡಿದೆ.