ಚಿಕ್ಕಮಗಳೂರು: ನಗರದ ವಿವಿಧ ಭಾಗದಲ್ಲಿ ರಾತ್ರಿ ವೇಳೆ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ 3 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ರಾತ್ರಿ ವೇಳೆ ಕೈಚಳಕ ತೋರಿಸ್ತಿದ್ದ ಬೈಕ್ ಕಳ್ಳನಿಗೆ ಕೊನೆಗೂ ಸಿಕ್ತು ಸೆರೆವಾಸ - ಆರೋಪಿ ಮುಸಾವೀರ್ ಪಾಷ
ಚಿಕ್ಕಮಗಳೂರು ನಗರದ ವಿವಿಧ ಭಾಗದಲ್ಲಿ ರಾತ್ರಿ ವೇಳೆ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮುಸಾವೀರ್ ಪಾಷ ಎಂದೂ ಗುರ್ತಿಸಲಾಗಿದ್ದು, ನಗರದ ಷರೀಫ್ ಗಲ್ಲಿ ನಿವಾಸಿಯಾಗಿದ್ದಾನೆ. ಗೌರಿ ಕಾಲುವೆಯ ಮುಬೀಲ್ ಎಂಬ ವ್ಯಕ್ತಿಯ ಜೊತೆ ಸೇರಿ ಕಳೆದ 8 ತಿಂಗಳಲ್ಲಿ 4 ಬೈಕ್ ಗಳನ್ನು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ಡಾಣ, ಕಲ್ಯಾಣ ನಗರ, ಬೈಪಾಸ್ ರಸ್ತೆ, ಹಾಗೂ ಹೌಸಿಂಗ್ ಬೋರ್ಡ್ಗಳಲ್ಲಿ ಕಳ್ಳತನ ಮಾಡಿದ್ದಾನೆ.
ಅಲ್ಲದೇ ಆರೋಪಿಗಳು ಕಳ್ಳತನ ಮಾಡಿದ್ದ ಬೈಕ್ಗಳನ್ನು ಬೇರೆಯವರಿಗೆ ಮಾರಾಟ ಮಾಡುವ ಯೋಜನೆ ರೂಪಿಸಿಕೊಂಡಿದ್ದರು. ಈ ವೇಳೆ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಮುಸಾವೀರ್ ಪಾಷನನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಮುಬಿಲ್ ತಲೆ ಮರೆಸಿಕೊಂಡಿರುವುದರಿಂದ ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.