ಕರ್ನಾಟಕ

karnataka

ETV Bharat / state

ಬಾಲಕಿಗೆ ಧೂಮಪಾನ ಮಾಡಿಸಿ ವಿಡಿಯೋ ಹರಿಬಿಟ್ಟ ಪೋಷಕರು!? - Moodikare Taluk of chikmagaluru

ಅಂತಹುದರಲ್ಲಿ ಆಕೆಯ ಪೋಷಕರೇ ಮಗಳಿಗೆ ಬೀಡಿ ಸೇದಲು ಹೇಳಿದ್ದಾರೆ. ಅಷ್ಟೇ ಅಲ್ಲ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ (Social networking site) ಹರಿ ಬಿಟ್ಟಿದ್ದಾರೆ. ಈ ವಿಡಿಯೋ ನೋಡಿದ ಹಲವರು ಬೈದು ಕಮೆಂಟ್​ ಮಾಡುತ್ತಿದ್ದಾರೆ..

The girl who smoked in chikmagluru
ಬಾಲಕಿಗೆ ಧುಮಪಾನ ಮಾಡಿಸಿ ವಿಡಿಯೋ ಹರಿಬಿಟ್ಟ ಪೋಷಕರು?

By

Published : Nov 12, 2021, 4:57 PM IST

ಚಿಕ್ಕಮಗಳೂರು: ಯಾರೇ ಆಗಲಿ ಮದ್ಯಪಾನ ಹಾಗೂ ಧೂಮಪಾನ (Alcohol and smoking ) ಮಾಡುವುದು ಆರೋಗ್ಯಕ್ಕೆ ಹಾನಿಕರ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಬಾಲಕಿಗೆ ಧೂಮಪಾನ ಮಾಡಿಸಲಾಗಿದೆ.

ಪುಟ್ಟ ಮಗುವೊಂದರ ಕೈಗೆ ಬೀಡಿ ನೀಡಿ ಮೂಗಿನಲ್ಲಿ ಹೊಗೆ ಬಿಡು ಎಂದು ಯಾರೋ ಹೇಳಿದ್ದಾರೆ. ಅದರಂತೆ ಆಕೆ ಕೂಡ ಬೀಡಿ ಸೇದಿ ಹೊಗೆ ಬಿಟ್ಟಿದ್ದಾಳೆ. ಇದನ್ನು ಮಾಡಿಸಿದವರು ಆಕೆಯ ಪೋಷಕರೇ ಎನ್ನಲಾಗುತ್ತಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ (Moodigere Taluk) ಸಮೀಪದ ಜಾಣಿಗಿ ಗ್ರಾಮದಲ್ಲಿ (Janigi village) ಈ ಘಟನೆ ಜರುಗಿದೆ ಎನ್ನಲಾಗುತ್ತಿದೆ. ಸಣ್ಣ ಮಕ್ಕಳ ಮುಂದೆ ಧೂಮಪಾನ, ಮದ್ಯಪಾನ ಮಾಡುವುದೇ ತಪ್ಪು.

ಅಂತಹುದರಲ್ಲಿ ಆಕೆಯ ಪೋಷಕರೇ ಮಗಳಿಗೆ ಬೀಡಿ ಸೇದಲು ಹೇಳಿದ್ದಾರೆ. ಅಷ್ಟೇ ಅಲ್ಲ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ (Social networking site) ಹರಿ ಬಿಟ್ಟಿದ್ದಾರೆ. ಈ ವಿಡಿಯೋ ನೋಡಿದ ಹಲವರು ಬೈದು ಕಮೆಂಟ್​ ಮಾಡುತ್ತಿದ್ದಾರೆ.

ABOUT THE AUTHOR

...view details