ಚಿಕ್ಕಮಗಳೂರು:ಸಿದ್ರಾಮುಲ್ಲಾ ಖಾನ್ ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ಸಿಗರಿಗೆ ಮೈ ಉರಿ ಹತ್ತಿದೆ. ಹೀಗೆ ಉರಿ ಹತ್ತುತ್ತೆ ಎಂದು ಗೊತ್ತಿದ್ರೆ 10 ವರ್ಷ ಮೊದಲೇ ಹೇಳುತ್ತಿದ್ದೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ನೀವು ಪ್ರಧಾನಿಗೆ ಕೊಲೆ ಗಡುಕ, ನರಹಂತಕ, ರಾವಣ, ಭಸ್ಮಾಸುರ ಎಂದು ಕರೆದಿದ್ದೀರಿ. ಸಿದ್ರಾಮುಲ್ಲಾ ಖಾನ್ ಅನ್ನೋದು ಬೈಗುಳವಾ. ಅದು ಬೈಗುಳ ಅಲ್ಲಾ. ನಿಮಗೆ ಉರಿ ಹತ್ತಿದ್ಯಾಕೆ? ನಿಮ್ಮ ಭಾವನೆಗೆ ಕೊಟ್ಟ ಬಿರುದು ಎಂದು ತಿಳಿಯಬಹುದು ಎಂದು ತಿರುಗೇಟು ಕೊಟ್ಟಿದ್ದಾರೆ.