ಕರ್ನಾಟಕ

karnataka

ETV Bharat / state

ಕಾಫಿ ದೊರೆಗೆ ಮಲೆನಾಡಿನಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ... - CCD owner Siddarth

ಮಲೆನಾಡು ಭಾಗದ ಹಿರಿಯ ಉದ್ಯಮಿ, ಚಿಕ್ಕಮಗಳೂರಿನ ಕಾಫಿಯನ್ನು ವಿಶ್ವಕ್ಕೆ ಪರಿಚಯಿಸಿದ ಸಿದ್ಧಾರ್ಥ್​ ಹೆಗ್ಡೆ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಚಿಕ್ಕಮಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಒಂದು ನಿಮಿಷಗಳ ಕಾಲ ಮೌನಚರಣೆ ಮಾಡಲಾಯಿತು.

ಕಾಫಿದೊರೆಗೆ ಶ್ರದ್ಧಾಂಜಲಿ

By

Published : Aug 14, 2019, 1:31 PM IST

ಚಿಕ್ಕಮಗಳೂರು: ಕೆಫೆ ಕಾಫೀ ಡೇ ಸಂಸ್ಥಾಪಕ ಸಿದ್ಧಾರ್ಥ್​ ಹೆಗ್ಡೆ ಅವರು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ, ನಗರದ ವಿಜಯಪುರದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದಿಂದ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಕಾಫೀ ಡೇಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರು, ಅಂಧ ಮಕ್ಕಳು, ಗಣ್ಯರು, ಹಿತೈಷಿಗಳು, ಸ್ನೇಹಿತರು ಸೇರಿದಂತೆ ರಾಜಕೀಯ ನಾಯಕರು ಭಾಗವಹಿಸಿ ಸಿದ್ಧಾರ್ಥ್​ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.

ಮಲೆನಾಡಿನಲ್ಲಿ ಸಾರ್ವಜನಿಕ ಶ್ರದ್ಧಾಂಜಲಿ

ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್​ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ, ಶಾಸಕ ಸಿ ಟಿ ರವಿ, ಕಾಂಗ್ರೆಸ್ ಮುಖಂಡ ಬಿ ಎಲ್ ಶಂಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ABOUT THE AUTHOR

...view details