ಚಿಕ್ಕಮಗಳೂರು:ಚಿಕ್ಕಮಗಳೂರಿನಲ್ಲಿ ಮತಯಾಚನೆ ಮಾಡುವ ವೇಳೆಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಗೆ ಸಾರ್ವಜನಿಕರೊಬ್ಬರು ನೇರಾವಾಗಿ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ಸರಿಯಾಗಿ ಕೆಲಸ ಮಾಡದೆ ಈಗ ವೋಟು ಕೇಳಲು ಬಂದಿದ್ದೀರಾ?... ಶೋಭಾಗೆ ಗ್ರಾಮಸ್ಥನ ನೇರ ಪ್ರಶ್ನೆ! - ಮತಯಾಚನೆ
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದಲ್ಲಿ ಶೋಭಾ ಕರಂದ್ಲಾಜೆಗೆ ಗ್ರಾಮಸ್ಥನಿಂದ ತರಾಟೆ. ಕಳೆದ ಐದು ವರ್ಷದಲ್ಲಿ ಸರಿಯಾಗಿ ಕೆಲಸ ಮಾಡದೇ ಈಗ ವೋಟು ಕೇಳಲು ಬಂದಿದ್ದೀರಾ, ಮೊದಲು ನೀರು ಕೊಡಿ ಆ ಮೇಲೆ ವೋಟು ಕೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎಸ್.ಬಿದರೆ ಗ್ರಾಮದಲ್ಲಿ ಗ್ರಾಮಸ್ಥರೊಬ್ಬರು ಶೋಭಾ ಅವರಿಗೆ ನೇರವಾಗಿಯೇ ಪ್ರಶ್ನೆ ಮಾಡಿದ್ದು, ಕಳೆದ ಐದು ವರ್ಷದಲ್ಲಿ ಸರಿಯಾಗಿ ಕೆಲಸ ಮಾಡದೇ ಈಗ ವೋಟು ಕೇಳಲು ಬಂದಿದ್ದೀರಾ, ಮೊದಲು ನೀರು ಕೊಡಿ ಆ ಮೇಲೆ ವೋಟು ಕೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಬಿಜೆಪಿ ಮುಖಂಡರು ಗ್ರಾಮಸ್ಥನನ್ನು ಸಮಾಧಾನ ಪಡಿಸಲು ಮುಂದಾದರೂ ಗ್ರಾಮಸ್ಥ ಸುಮ್ಮನಾಗದೇ ತನ್ನ ಆಕ್ರೋಶವನ್ನು ಹೊರ ಹಾಕಿದ್ದಾನೆ. ನಂತರ ಶೋಭಾ ಕರಂದ್ಲಾಜೆ ಎದುರು ಗ್ರಾಮಸ್ಥರು ಹಾಗೂ ಬಿಜೆಪಿ ಮುಖಂಡರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಶೋಭಾ ಕರಂದ್ಲಾಜೆ ಮಧ್ಯಪ್ರವೇಶ ಮಾಡಿ ಇಬ್ಬರನ್ನೂ ಸಮಾಧಾನಪಡಿಸಿ ನಂತರ ಬೇರೆ ಹಳ್ಳಿಗೆ ತಮ್ಮ ಚುನಾವಣಾ ಪ್ರಚಾರಕ್ಕೆ ತೆರಳಿದರು.