ಚಿಕ್ಕಮಗಳೂರು: ಕಳೆದ 11 ದಿನಗಳಿಂದ ತರೀಕೆರೆಯ ಖಾಜಿ ಬೀದಿ ಸೀಲ್ಡೌನ್ ಮಾಡಲಾಗಿತ್ತು. ಸೀಲ್ಡೌನ್ ತೆರವು ಹಿನ್ನೆಲೆ ಈ ಭಾಗದಲ್ಲಿ ವ್ಯಾಪಾರ ವಹಿವಾಟು ಆರಂಭವಾಗಿದ್ದು, ತರೀಕೆರೆ ನಗರದ ಜನತೆ ಇದರಿಂದ ನಿಟ್ಟುಸಿರು ಬಿಡುವಂತಾಗಿದೆ.
ತರೀಕೆರೆಯ ಖಾಜಿ ಬೀದಿ ಸೀಲ್ ಡೋನ್ ತೆರವು: ಪುಷ್ಪವೃಷ್ಠಿ ಮೂಲಕ ಕೊರೊನಾ ವಾರಿಯರ್ಸ್ಗೆ ಧನ್ಯವಾದ - ಸೀಲ್ಡೌನ್
ತರೀಕೆರೆ ತಾಲೂಕಿನ ಗರ್ಭಿಣಿಗೆ ಕೊರೊನಾ ಪಾಸಿಟಿವ್ ಬಂದಿದ್ದ ಹಿನ್ನೆಲೆ ಆ ಮಹಿಳೆ ವಾಸಿಸುತ್ತಿದ್ದ ಪ್ರದೇಶವನ್ನು ಜಿಲ್ಲಾಡಳಿತ ಸೀಲ್ಡೌನ್ ಮಾಡಿತ್ತು. ಆದರೆ ಈ ಮಹಿಳೆಗೆ ಕೊರೊನಾ ನೆಗೆಟಿವ್ ಬಂದಿರುವ ಕಾರಣ ಸೀಲ್ಡೌನ್ ಅನ್ನು ಪೊಲೀಸರು ತೆರವು ಮಾಡಿದ್ದಾರೆ.
ತರೀಕೆರೆಯ ಖಾಜಿಬೀದಿಯಲ್ಲಿ ಸೀಲ್ ಡೋನ್ ತೆರವು: ಕೊರೊನಾ ವಾರಿಯರ್ಸ್ ಜನರ ಧನ್ಯವಾದ
ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ನಿರ್ಬಂಧಗಳನ್ನು ತೆಗೆದ ಪೊಲೀಸರು ಹಾಗೂ ಪೌರ ಕಾರ್ಮಿಕರು ಹಾಗೂ ಅಧಿಕಾರಿಗಳು ಈ ಬೀದಿ ಪ್ರವೇಶಿಸುತ್ತಿದ್ದಂತೆ ಜನರು ಹೂಮಳೆ ಸುರಿದು, ಆರತಿ ಬೆಳಗಿ ಧನ್ಯವಾದ ಅರ್ಪಿಸಿದರು.