ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ವಾರದಿಂದ ಸುರಿಯುತ್ತಿದ್ದ ವರುಣ ಈಗ ಸ್ವಲ್ಪ ಶಾಂತವಾಗಿದ್ದಾನೆ.
ವಾರದಿಂದ ಆರ್ಭಟಿಸಿ ಈಗ ಬಿಡುವು ಕೊಟ್ಟ ವರುಣ...ಆದರೂ ಆತಂಕದಲ್ಲಿ ಜನ - ಬಿಡುವು ಕೊಟ್ಟ ಮಳೆ
ಮಲೆನಾಡು ಭಾಗದಲ್ಲಿ ವಾರದಿಂದ ಆರ್ಭಟಿಸುತ್ತಿದ್ದ ಮಳೆ ಈಗ ಬಿಡುವು ನೀಡಿದೆ. ಇದರಿಂದ ಜನ ನಿರಾಳರಾದರೂ ಅವರ ಮೊಗದಲ್ಲಿ ಆತಂಕ ಮಾತ್ರ ಕಡಿಮೆಯಾಗಿಲ್ಲ.
rain reducing at district wise lowdown current situation
ಜಿಲ್ಲೆಯ ತುಂಗಾ, ಭದ್ರೆ, ಹೇಮಾವತಿ ನದಿಗಳ ಹರಿವಿನ ಮಟ್ಟವೂ ಇಳಿಕೆಯಾಗಿದ್ದು, ಇದರಿಂದ ಮಲೆನಾಡಿನ ಜನರು ನಿಟ್ಟುಸಿರು ಬಿಡುವಂತಾಗಿದೆ. ಭದ್ರಾ ನದಿಯ ಆರ್ಭಟಕ್ಕೆ ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿತ್ತು. ಅದೀಗ ಯಥಾ ಸ್ಥಿತಿಗೆ ಬಂದಿದೆ.
ಪ್ರವಾಹ ಹೆಚ್ಚಾಗಿದ್ದರಿಂದ ಮೂರು ಅಡಿಗಳಷ್ಟು ಸೇತುವೆ ಮೇಲೆ ನೀರು ಹರಿಯುತ್ತಿತ್ತು. ಅದೀಗ ಕಡಿಮೆಯಾದ ಕಾರಣ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ನಿರಂತರವಾಗಿ ರಸ್ತೆ ಸಂಚಾರ ಆರಂಭವಾಗಿದೆ.