ಕರ್ನಾಟಕ

karnataka

ETV Bharat / state

ಆಸ್ತಿ ವಿವಾದ: ಕತ್ತಿಯಿಂದ ಕಡಿದು ತಂಗಿಯ ಕೊಲೆಗೆ ಯತ್ನಿಸಿದ ಅಣ್ಣ! - ಅಣ್ಣನೇ ತಂಗಿಯ ಮೇಲೆ ಕೊಲೆ ಯತ್ನ

ಆಸ್ತಿವಿವಾದ ತಾರಕಕ್ಕೇರಿ ಅಣ್ಣನೇ ತಂಗಿಯ ಮೇಲೆ ಕೊಲೆ ಯತ್ನ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಬಾಲಕಿ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Property dispute Attempted murder in Chikmagalur
ಆಸ್ತಿ ವಿವಾದ

By

Published : May 10, 2022, 4:07 PM IST

ಚಿಕ್ಕಮಗಳೂರು:ಸಹೋದರರ ನಡುವೆ ಜಮೀನಿನ ವಿಚಾರವಾಗಿ ಉಂಟಾದ ಕಲಹ ತಾರಕಕ್ಕೇರಿದ ಪರಿಣಾಮ, ಕತ್ತಿಯಿಂದ ಬಾಲಕಿಯ ಕೈಯನ್ನು ಕಡಿದು ಕೊಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಗ್ರಾಮದ ರಮೇಶ್ ಹಾಗೂ ಜಯಂತ್ ಸಹೋದರರ ನಡುವೆ ಜಮೀನಿಗಾಗಿ ಕಲಹ ಉಂಟಾಗಿದ್ದ ವೇಳೆ ಈ ಘಟನೆ ನಡೆದಿದೆ.

ಮೊನ್ನೆ ರಾತ್ರಿ ವೇಳೆ ಜಯಂತ್, ಅವರ ಹೆಂಡತಿ ಹಾಗೂ ಮಗ ಜ್ಞಾನದೇವ್ ಮೂವರು ಸೇರಿ ಜಾಗದ ವಿಚಾರವಾಗಿ ಮತ್ತೆ ಗಲಾಟೆ ಮಾಡಿದ್ದಾರೆ. ಮಾತು ತಾರಕಕ್ಕೇರಿದ ವೇಳೆ ಜಯಂತ್​ ಮಗ ಜ್ಞಾನದೇವ್ ರಮೇಶನ ಮಗಳ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ್ದಾನೆ.

ಹಲ್ಲೆಗೊಳಗಾದ ಬಾಲಕಿಯು ಕತ್ತಿಯಿಂದ ಹಲ್ಲೆಗೈದು ತನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆಂದು ಆರೋಪಿಸಿ ಮೂಡಿಗೆರೆಯ ಬಣಕಲ್ ಪೊಲೀಸ್ ಠಾಣೆಯಲ್ಲಿ ಜಯಂತ್, ಅವರ ಪತ್ನಿ ಹಾಗೂ ಪುತ್ರ ಜ್ಞಾನದೇವ್ ಮೇಲೆ ದೂರು ನೀಡಿದ್ದಾಳೆ. ಕೂಡಲೇ ಪೊಲೀಸರು ಜಯಂತ್ ಗೌಡನನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ವಿಚಾರಣೆ ಆರಂಭವಾಗಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅವರ ಬಂಧನ ಹಾಗೂ ವಿಚಾರಣೆಯ ನಂತರ ಹೆಚ್ಚಿನ ಮಾಹಿತಿಗಳು ಲಭ್ಯವಾಗಲಿದೆ. ಹಲ್ಲೆಗೊಳಗಾದ ಬಾಲಕಿ ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾಳೆ.

ಇದನ್ನೂ ಓದಿ:ದ್ವಿಚಕ್ರ ವಾಹನ ಹಿಂದಿಕ್ಕುವ ವಿಷಯಕ್ಕೆ ಜಗಳ: ವ್ಯಕ್ತಿ ಹೊಡೆದು ಕೊಂದ ದುರುಳರು!

ABOUT THE AUTHOR

...view details