ಚಿಕ್ಕಮಗಳೂರು :ಯಾರೂ ಕೂಡ ಆಳಂದ ಶಾಸಕ ಬಿ ಆರ್ ಪಾಟೀಲ್ ಅವರ ಕ್ಷಮೆ ಕೇಳಿಲ್ಲ. ಬಿ ಆರ್ ಪಾಟೀಲ್ ವಿಚಾರದಲ್ಲಿ ಎಲ್ಲರೂ ಒಳ್ಳೆಯದನ್ನೇ ಮಾತನಾಡಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಸಹ ಒಳ್ಳೆಯದನ್ನೇ ಮಾತನಾಡಿದ್ದಾರೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿಕೆ ನೀಡಿದ್ದಾರೆ.
ಬಿ ಆರ್ ಶಾಸಕಾಂಗ ಸಭೆಯನ್ನು ಕರೆಯುವಂತೆ ಹೇಳಿದ್ದರು. ಅದಕ್ಕೆ ಮುಖ್ಯಮಂತ್ರಿಯವರು ನನ್ನ ಬಳಿ ಬಂದು ಹೇಳಬಹುದಲ್ಲ ಎಂದರು. ಕೇರಳದ ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿಯವರ ನಿಧನದಿಂದ ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಬರಲು ಆಗದ ಕಾರಣ ಸಭೆ ಮುಂದೆ ಹೋಗಿದೆ ಅಷ್ಟೇ. ಮುಖ್ಯಮಂತ್ರಿಯವರು ನಿಜವಾಗಿಯೂ ಒಬ್ಬ ಡೆಮಾಕ್ರಟಿಕ್ ವ್ಯಕ್ತಿ. ಇವರು ತುರ್ತಾಗಿ ಸಿಎಲ್ಪಿ ಮೀಟಿಂಗ್ ಕರೆದಿದ್ದಾರೆ. ಬೇರೆ ಏನೂ ಇಲ್ಲ. ಎಲ್ಲ ಚೆನ್ನಾಗಿ ಮಾತನಾಡಿದ್ದಾರೆ. ಗಲಾಟೆ ಏನೂ ನಡೆದಿಲ್ಲ. ಎಲ್ಲರೂ ಮುಖ್ಯಮಂತ್ರಿಯವರಿಗೆ ಸಪೋರ್ಟ್ ಮಾಡಿದ್ದಾರೆ. ಕೆಲ ಸಚಿವರಿಗೆ ಬೇಜಾರು ಆಗುತ್ತೆ. ಅಭಿವೃದ್ಧಿ ಕಾರ್ಯವನ್ನ ತಾತ್ಕಾಲಿಕವಾಗಿ ತಡೆ ಹಿಡಿದಿದ್ದೇವೆ. ಅದನ್ನ ಮತ್ತೆ ಪ್ರಾರಂಭ ಮಾಡಲು ಆದೇಶ ಕೊಡಲು ಮುಂದಾಗಿದ್ದಾರೆ ಎಂದು ಹೇಳಿದರು. ಬಜೆಟ್‍ನಲ್ಲಿನಲ್ಲಿರುವ ಅಭಿವೃದ್ಧಿ ಕೆಲಸ ಆಗಿಯೇ ಆಗುತ್ತೆ. ಹೊಸ ಕಾರ್ಯಕ್ರಮಕ್ಕಷ್ಟೇ ನಿರ್ಬಂಧ ಹಾಕಲಾಗಿದೆ ಎಂದು ತಿಳಿಸಿದರು.
ಜುಲೈ ತಿಂಗಳ ಬಿಲ್ ಆಗಸ್ಟ್ನಲ್ಲಿ ಬರಲಿದೆ: ಗೃಹ ಜ್ಯೋತಿ ಜುಲೈನಿಂದಲೇ ಪ್ರಾರಂಭ ಆಗಿದೆ. ಜುಲೈ ತಿಂಗಳ ಬಿಲ್ ಆಗಸ್ಟ್ನಲ್ಲಿ ಬರಲಿದೆ. ಆಗ ಎಲ್ಲರಿಗೂ ಉಚಿತವಾಗಿ ಕೊಡುತ್ತೇವೆ ಎಂದರು. ರಾಜ್ಯದಲ್ಲಿ ಮತ್ತೆ ಕಸ್ತೂರಿ ರಂಗನ್ ವರದಿ ಹಿನ್ನೆಲೆ ಪ್ರತಿಕ್ರಿಯಿಸಿದ ಸಚಿವರು, ಯಾವ ಮಂತ್ರಿ ಮಂಡಲದಲ್ಲೂ ಸೂಕ್ಷ್ಮ ವಲಯದ ಬಗ್ಗೆ ತೀರ್ಮಾನ ಆಗಿರಲಿಲ್ಲ. ಸೆನ್ಸಿಟೀವ್ ಝೋನ್ ಮಾಡಲು ಕ್ಯಾಬಿನೆಟ್ ಉಪ ಸಮಿತಿಗೆ ರಚನೆಗೆ ಅಧಿಕಾರ ಕೊಟ್ಟಿದ್ದೇವೆ. ಸಬ್ ಕಮಿಟಿಯಲ್ಲಿ ಚರ್ಚೆಯಾಗಿ ಕ್ಯಾಬಿನೆಟ್ನಲ್ಲಿ ತೀರ್ಮಾನವಾಗಲಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಇಂಧನ ಸಚಿವ ಕೆ ಜೆ ಜಾರ್ಜ್ ಸ್ಪಷ್ಟಪಡಿಸಿದರು.