ಚಿಕ್ಕಮಗಳೂರು :ಯಡಿಯೂರಪ್ಪ ಸಿಎಂ ಆದರೆ ನಾನು ಅವರ ಮನೆ ಮುಂದೆ ವಾಚ್‌ಮ್ಯಾನ್ ಆಗುತ್ತೇನೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದರು. ಮಾತಿಗೆ ತಕ್ಕಂತೆ ನಡೆಯೋದಾದ್ರೆ ಅವರು ಸಿಎಂ ಮನೆ ಮುಂದೆ ವಾಚ್‌ಮ್ಯಾನ್ ಆಗಿ ಇರುತ್ತಿದ್ದರು. ಎಂಎಲ್ಎ ಆಗುತ್ತಿರಲಿಲ್ಲ ಎಂದು ಸಚಿವ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಜಮೀರ್ ತಮ್ಮ ವಿರುದ್ಧದ ಆರೋಪ ಸಾಬೀತಾದ್ರೆ ತನ್ನ ಸಂಪೂರ್ಣ ಆಸ್ತಿ ಸರ್ಕಾರಕ್ಕೆ ಬರೆದು ಕೊಡುವುದಾಗಿ ಹೇಳಿದ್ದಾರೆ. ಆಸ್ತಿ ಬರೆದುಕೊಡುತ್ತೇನೆ ಅನ್ನೋದು ಪ್ರಚಾರದ ಮಾತು. ಆಸ್ತಿ ಬರೆಯಲಿ, ಬಿಡಲಿ. ಆದರೆ, ಯಾರ್ಯಾರು ಈ ಡ್ರಗ್ಸ್ ಮಾಫಿಯಾದಲ್ಲಿ ತೊಡಗಿದ್ದಾರೆ ಅವರನ್ನು ಬೇರು ಸಮೇತ ಕಿತ್ತು ಹಾಕುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತೆ. ಇಷ್ಟು ಗಂಭೀರ ತನಿಖೆ ಇದೇ ಮೊದಲು ನಡೆಯುತ್ತಿರುವುದು. ಈ ಬಗ್ಗೆ ತನಿಖೆ ಗಂಭೀರವಾಗಿ ನಡೆಯುತ್ತಿದೆ ಎಂದರು.