ಕರ್ನಾಟಕ

karnataka

ETV Bharat / state

ಹೇಮಾವತಿ ನದಿಯಲ್ಲಿ ಪಾತ್ರೆ ತೊಳೆಯುವಾಗ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು - ಹೇಮಾವತಿ ಸುದ್ದಿ

ಪಾತ್ರೆ ತೊಳೆಯುವ ವೇಳೆ ತಲೆ ಸುತ್ತು ಬಂದು ಬಿದ್ದಿರುವ ಶಂಕೆ ವ್ಯಕ್ತವಾಗುತ್ತಿದ್ದು, ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

man-dies-after-drowned-in-hemavathi-river-in-chikkamagalore
ಹೇಮಾವತಿ ನದಿಯಲ್ಲಿ ಪಾತ್ರೆ ತೊಳೆಯುವಾಗ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

By

Published : Jan 23, 2021, 5:27 PM IST

ಚಿಕ್ಕಮಗಳೂರು: ನದಿಯಲ್ಲಿ ಪಾತ್ರೆ ತೊಳೆಯುವ ವೇಳೆ ಕಾಲು ಜಾರಿ ಬಿದ್ದು ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್​​​​ನ ಗುಡ್ಡಟ್ಟಿ ಗ್ರಾಮದ ಹೇಮಾವತಿ ನದಿಯಲ್ಲಿ ಪಾತ್ರೆ ತೊಳೆಯುವ ವೇಳೆ ಅವಘಡ ಸಂಭವಿಸಿದೆ.

ಹೇಮಾವತಿ ನದಿಯಲ್ಲಿ ಪಾತ್ರೆ ತೊಳೆಯುವಾಗ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ಗ್ರಾಮದ ರಾಮು (40) ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಸಮಾಜ ಸೇವಕ ಆರೀಫ್ ಮೃತದೇಹವನ್ನು ನೀರಿನಿಂದ ಹೊರ ತೆಗೆದಿದ್ದಾರೆ.

ಪಾತ್ರೆ ತೊಳೆಯುವ ವೇಳೆ ತಲೆ ಸುತ್ತು ಬಂದು ಬಿದ್ದಿರುವ ಶಂಕೆ ವ್ಯಕ್ತವಾಗುತ್ತಿದ್ದು, ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಊಟದ ತಟ್ಟೆ ತೊಳೆಯಲು ಹೋಗಿ ನೀರುಪಾಲಾದ ಬಾಲಕ

ABOUT THE AUTHOR

...view details