ಚಿಕ್ಕಮಗಳೂರು: ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ತುಂಬಾ ಪ್ರಸಿದ್ಧಿ ಪಡೆದಿರುವಂತಹ ಮುಳ್ಳಯ್ಯನ ಗಿರಿ ಹಾಗೂ ಸೀತಾಳಯ್ಯ ನ ಗಿರಿ ಶೋಲ ಅರಣ್ಯದ ಮಧ್ಯೆ ಭೂ ಕುಸಿತ ಉಂಟಾಗಿದ್ದು, ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ.
ಮುಳ್ಳಯ್ಯನ ಗಿರಿಯಲ್ಲಿ ಗುಡ್ಡ ಕುಸಿತ: ರಸ್ತೆ ಸಂಚಾರ ಬಂದ್ - ರಸ್ತೆ ಸಂಚಾರ ಬಂದ್
ಮುಳ್ಳಯ್ಯನ ಗಿರಿ ಹಾಗೂ ಸೀತಾಳಯ್ಯನ ಗಿರಿ ಶೋಲ ಅರಣ್ಯದ ಮಧ್ಯೆ ಭೂ ಕುಸಿತ ಉಂಟಾಗಿದ್ದು, ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ.
ಮುಳ್ಳಯ್ಯನ ಗಿರಿ
ಗುಡ್ಡದ ಮಣ್ಣು ರಸ್ತೆಗೆ ಬಂದು ಬಿದ್ದಿದ್ದು, ತೆಡೆಗೋಡೆಯ ಪಕ್ಕದಲ್ಲಿರುವಂತಹ ಮಣ್ಣು ನಿಧಾನವಾಗಿ ಜರುಗಲು ಪ್ರಾರಂಭ ಮಾಡಿದೆ. ಇದರಿಂದ ಪ್ರವಾಸಿಗರು ರಸ್ತೆಯಲ್ಲಿ ಸಂಚಾರ ಮಾಡಲು ಭಯ ಪಡುತ್ತಿದ್ದು, ಬಂದಂತಹ ಪ್ರವಾಸಿಗರು ಮನೆಗೆ ವಾಪಸ್ ತೆರಳುತ್ತಿದ್ದಾರೆ. ಈ ಭಾಗದಲ್ಲಿಯೂ ಗುಡ್ಡ ಕುಸಿತ ಹಾಗೂ ಭೂ ಕುಸಿತ ಸಂಭವಿಸುತ್ತಿದ್ದು, ರಸ್ತೆಯಲ್ಲಿ ತೋಟದ ಕಾರ್ಮಿಕರು ಹಾಗೂ ಸ್ಥಳೀಯರು ಸಂಚಾರ ಮಾಡೋದಕ್ಕೆ ಭಯ ಪಡುತ್ತಿದ್ದಾರೆ.
Last Updated : Aug 8, 2019, 1:08 PM IST