ಕರ್ನಾಟಕ

karnataka

By

Published : Jul 18, 2021, 3:00 PM IST

ETV Bharat / state

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ : ವರುಣ ಲೆಕ್ಕಿಸದೇ ಹರಿದು ಬಂದ ಪ್ರವಾಸಿಗರು

ಅನ್​​​ಲಾಕ್ ಆದೊಡನೇ ನೆಮ್ಮದಿಯ ನಿಟ್ಟುಸಿರು ಬಿಟ್ಟು ತಮ್ಮ-ತಮ್ಮ ನೆಚ್ಚಿನ ತಾಣಗಳತ್ತ ಹೆಜ್ಜೆ ಹಾಕಿದ್ದಾರೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕವಿಕಲ್ ಗಂಡಿ, ಹೊನ್ನಮ್ಮನ ಹಳ್ಳ, ಕೆಮ್ಮಣ್ಣುಗುಂಡಿ ರಸ್ತೆ, ಗಾಳಿಕೆರೆ ಈ ಭಾಗಕ್ಕೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ ಭ್ರಮಿಸುತ್ತಿದ್ದಾರೆ. ಒಂದೇ ಸಮನೇ ಮಳೆ ಸುರೀತಿದ್ರೂ ಕೇರ್ ಮಾಡದೇ ಖುಷಿ ಖುಷಿಯಿಂದ ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದ್ರು..

chikmagalore
ಪ್ರವಾಸಿಗರ ಲಗ್ಗೆ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣದೇವ ಮನಸ್ಸೋ ಇಚ್ಛೆ ಸುರಿಯುತ್ತಿದ್ದು, ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ, ನೀಡುವಳೆ, ಬಾಳೂರು,ಬಣಕಲ್, ಎನ್‌ಆರ್‌ಪುರ, ಕೊಪ್ಪ, ಬಾಳೆಹೊನ್ನೂರು, ಶೃಂಗೇರಿಯಲ್ಲಿ ಭಾರಿ ಮಳೆಯಾಗಿದೆ.

ಚಿಕ್ಕಮಗಳೂರು ನಗರದಲ್ಲಿ ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದೆ. ಆಗಾಗ್ಗೆ ಮಳೆ ಸುರಿಯುತ್ತಿದೆ. ಇದರ ಜೊತೆಗೆ ಮಲೆನಾಡು ಭಾಗದಲ್ಲೂ ಧಾರಾಕಾರ ಮಳೆ ಸುರಿದಿದೆ. ಭಾರೀ ಮಳೆಯಿಂದ ಮಲೆನಾಡು ಭಾಗದಲ್ಲಿ ಅಲ್ಲಲ್ಲೇ ರಸ್ತೆ ಬದಿಯ ಮರಗಳು ಧರೆಗುರುಳಿರೋದ್ರಿಂದ ಮಲೆನಾಡ ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ.

ಧಾರಾಕಾರ ಮಳೆ

ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ, ತುಂಗ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟದಲ್ಲಿ ಕೂಡ ಹೆಚ್ಚಳ ಉಂಟಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವಾಹನ ಸಂಚಾರದಲ್ಲಿ ಅಸ್ತವ್ಯಸ್ತವಾಗುತ್ತಿದೆ.

ಪ್ರವಾಸಿಗರ ಲಗ್ಗೆ :ಕೊರೊನಾ ಲಾಕ್​ಡೌನ್​ ಅಂತಾ ಮನೆಯಿಂದ ಹೊರಗೆ ಬರಲಾಗದೇ ಲಾಕ್ ಆಗಿದ್ದ ಜನ ಇದೀಗ ಪ್ರವಾಸ ಆರಂಭಿಸಿದ್ದಾರೆ. ಅದರಲ್ಲೂ ಕಾಫಿನಾಡಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಮಳೆ, ಮಂಜು, ಗಾಳಿ ಏನನ್ನೂ ಲೆಕ್ಕಿಸದೇ ಪ್ರವಾಸಿಗರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮುಂಜಾನೆಯಿಂದಲೇ ಜಿಲ್ಲೆಗೆ ಪ್ರವಾಸಿಗರು ನೂರಾರು ಸಂಖ್ಯೆಯಲ್ಲಿ ಹರಿದು ಬರುತ್ತಿದ್ದು, ಮಳೆ, ಬೀಸೋ ತಣ್ಣನೆಯ ಗಾಳಿ, ಮಂಜಿನ ಹೊದಿಕೆ ನಡುವೆ ಹೊಸ ಲೋಕದಲ್ಲಿ ವಿಹರಿಸುತ್ತಿದ್ದಾರೆ.

ಅನ್​​​ಲಾಕ್ ಆದೊಡನೇ ನೆಮ್ಮದಿಯ ನಿಟ್ಟುಸಿರು ಬಿಟ್ಟು ತಮ್ಮ-ತಮ್ಮ ನೆಚ್ಚಿನ ತಾಣಗಳತ್ತ ಹೆಜ್ಜೆ ಹಾಕಿದ್ದಾರೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕವಿಕಲ್ ಗಂಡಿ, ಹೊನ್ನಮ್ಮನ ಹಳ್ಳ, ಕೆಮ್ಮಣ್ಣುಗುಂಡಿ ರಸ್ತೆ, ಗಾಳಿಕೆರೆ ಈ ಭಾಗಕ್ಕೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ ಸಂಭ್ರಮಿಸುತ್ತಿದ್ದಾರೆ. ಒಂದೇ ಸಮನೇ ಮಳೆ ಸುರೀತಿದ್ರೂ ಕೇರ್ ಮಾಡದೇ ಖುಷಿ ಖುಷಿಯಿಂದ ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದ್ರು.

ಪ್ರವಾಸಿಗರ ಲಗ್ಗೆ

ತಮ್ಮ ನೆಚ್ಚಿನ ಸ್ಥಳಕ್ಕೆ ಬಂದ ಟೂರಿಸ್ಟ್, ಪ್ರಕೃತಿಯ ಮಡಿಲಲ್ಲಿ ಓಡಾಡಿ ಸಖತ್ ಎಂಜಾಯ್ ಮಾಡಿದ್ರು. ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣಗಳಲ್ಲಿಯೂ ಮಂಜು ಮುಸುಕಿದ ವಾತಾವರಣದಲ್ಲಿ ಪಯಣಿಸಿ ಖುಷಿಪಟ್ಟರು. ಮಳೆಯ ಸಿಂಚನ, ಇನ್ನೊಂದೆಡೆ ಆಕಾಶದಂತೆ ಭಾಸವಾಗೋ ಮಂಜಿನ ಹೊದಿಕೆ ಭುವಿಗೆ ಸ್ವರ್ಗವೇ ಇಳಿದಂತಹ ಅನುಭವವನ್ನ ಕಂಡು ಪ್ರಕೃತಿ ಪ್ರಿಯರು ತಮ್ಮದೇ ಲೋಕದಲ್ಲಿ ಕಳೆದು ಹೋದರು.

ABOUT THE AUTHOR

...view details