ಚಿಕ್ಕಮಗಳೂರು: ಒಂದು ವಾರದ ಹಿಂದೆ ಜಿಲ್ಲೆಯ ಶೃಂಗೇರಿ ನಗರದಲ್ಲಿ ನಾಗಪ್ಪ ಶೇಟ್ ಎಂಬುವವರ ಜ್ಯುವೆಲ್ಲರಿ ಶಾಪ್ಗೆ ನುಗ್ಗಿ, ಮಚ್ಚು ತೋರಿಸಿ ಮೂರು ಬಂಗಾರದ ಚೈನ್ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಶೃಂಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಗಾರದ ಚೈನ್ ಕದ್ದು ಪರಾರಿಯಾಗಿದ್ದ ಆರೋಪಿ ಅರೆಸ್ಟ್ - ಚಿಕ್ಕಮಗಳೂರು ಅಪರಾಧ ಸುದ್ದಿ
ಒಂದು ವಾರದ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ನಗರದಲ್ಲಿ ನಾಗಪ್ಪ ಶೇಟ್ ಎಂಬುವವರ ಜ್ಯುವೆಲ್ಲರಿ ಶಾಪ್ಗೆ ನುಗ್ಗಿ, ಮೂರು ಬಂಗಾರದ ಚೈನ್ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಶೃಂಗೇರಿ ಪೋಲಿಸರು ಬಂಧಿಸಿದ್ದಾರೆ.
ಆರೋಪಿಯ ಬಂಧನ
ಆರೋಪಿಯ ಕೃತ್ಯ ಅಂಗಡಿಯೊಳಗಿನ ಹಾಗೂ ಹೊರಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳ ಆಧಾರದ ಮೇಲೆ ಕೊಪ್ಪ ತಾಲೂಕಿನ ಮೇಗೂರು ಗ್ರಾಮದ ಮಿಥುನ್ (22)ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಮೂರು ಚೈನ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಕದ್ದಿರುವ ಚಿನ್ನದ ಚೈನುಗಳ ಮೌಲ್ಯ 2.5 ಲಕ್ಷ ರೂ ಆಗಿದೆ. ಆರೋಪಿ ಮಿಥುನ್ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.