ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಿನಲ್ಲಿ ಅನುಮಾನಾಸ್ಪದವಾಗಿ ಕಾಡುಕೋಣ ಸಾವು - chikkamagaluru Bison death news

ಬೃಹತ್ ಗಾತ್ರದ ಕಾಡುಕೋಣ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಎಡಮಡಿಲು ಗ್ರಾಮದಲ್ಲಿರುವ ಟೀ ಎಸ್ಟೇಟ್​ನಲ್ಲಿ ಘಟನೆ ನಡೆದಿದೆ.

ಕಾಡುಕೋಣ ಸಾವು
ಕಾಡುಕೋಣ ಸಾವು

By

Published : Sep 29, 2020, 3:20 PM IST

ಚಿಕ್ಕಮಗಳೂರು: ಅನುಮಾನಸ್ಪದವಾಗಿ ಬೃಹತ್ ಗಾತ್ರದ ಕಾಡುಕೋಣ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಎಡಮಡಿಲು ಗ್ರಾಮದಲ್ಲಿರುವ ಟೀ ಎಸ್ಟೇಟ್​ನಲ್ಲಿ ಘಟನೆ ನಡೆದಿದೆ.

ಸಾವನ್ನಪ್ಪಿದ ಕಾಡುಕೋಣನನ್ನು ಕಂಡ ಸ್ಥಳೀಯರು ಕೂಡಲೇ ಕೊಪ್ಪ ಅರಣ್ಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಪ್ಪ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಕೊಪ್ಪ ತಾಲೂಕಿನ ಎಸಿಎಫ್ ನೇತೃತ್ವದಲ್ಲಿ ಮೃತ ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆಯ ನಂತರೇ ಕಾಡುಕೋಣದ ಸಾವಿಗೆ ನಿಖರವಾದ ಕಾರಣ ತಿಳಿದು ಬರಲಿದೆ.

ABOUT THE AUTHOR

...view details