ಚಿಕ್ಕಮಗಳೂರು:ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ನಗರದಲ್ಲಿ ಬೀದಿ ನಾಯಿಗಳು ಕಾಡು ಕುರಿಯೊಂದನ್ನು ಹಿಡಿದು ಅಟ್ಟಾಡಿಸಿಕೊಂಡು ಬಂದಿದ್ದವು. ಈ ವೇಳೆ ದಿಕ್ಕೆಟ್ಟ ಕಾಡು ಕುರಿ ಬೇರೆ ದಾರಿ ಕಾಣದೆ ಪ್ರಥಮ ದರ್ಜೆ ಕಾಲೇಜಿಗೆ ನುಗ್ಗಿ ನಾಯಿ ಬಾಯಿಯಿಂದ ತಪ್ಪಿಸಿಕೊಂಡಿದೆ. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಕಾಡು ಕುರಿಯನ್ನು ಹಿಡಿದು ನಾಯಿಗಳನ್ನು ಓಡಿಸಿದ್ದಾರೆ.
ಬೀದಿ ನಾಯಿಗಳ ದಾಳಿಯಿಂದ ಕಾಡು ಕುರಿ ರಕ್ಷಿಸಿದ ವಿದ್ಯಾರ್ಥಿಗಳು
ಕಳಸ ಪ್ರಥಮ ದರ್ಜೆ ಕಾಲೇಜಿಗೆ ಬಂದಿದ್ದ ಕಾಡು ಕುರಿಯನ್ನು ನಾಯಿಗಳ ದಾಳಿಯಿಂದ ಇಲ್ಲಿನ ವಿದ್ಯಾರ್ಥಿಗಳು ರಕ್ಷಿಸಿದ್ದಾರೆ.
Forest sheep
ಈ ಬಗ್ಗೆ ಕಳಸ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ನಾಯಿ ಕಚ್ಚಿ ಗಾಯಗೊಂಡಿದ್ದ ಕಾಡುಕುರಿಗೆ ಪಶು ವೈದ್ಯಕೇಂದ್ರದಲ್ಲಿ ಚಿಕಿತ್ಸೆ ನೀಡಿ ಮರಳಿ ಕಾಡಿಗೆ ಬಿಡಲಾಗಿದೆ.