ಚಿಕ್ಕಮಗಳೂರು: ಜಿಲ್ಲೆಯ ಅರಣ್ಯದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಕಾಡ್ಗಿಚ್ಚು ನಿಲ್ಲುವಂತಹ ಲಕ್ಷಣಗಳು ಕಾಣಿಸುತ್ತಿಲ್ಲ. ಇಂದು ಕೂಡ ಮತ್ತೆ ಅರಣ್ಯದಲ್ಲಿ ಬೆಂಕಿ ಬಿದ್ದಿದ್ದು ನೂರಾರು ಎಕರೆಯಲ್ಲಿ ಬೆಳೆದಿದ್ದಂತಹ ಅರಣ್ಯ ಸಂಪತ್ತು ಬೆಂದು ನಾಶವಾಗಿ ಹೋಗಿದೆ.
ನಿಲ್ಲದ ಕಾಡ್ಗಿಚ್ಚು: ಬೆಂಕಿ ನಂದಿಸಲು ಅರಣ್ಯಾಧಿಕಾರಿಗಳ ಹರಸಾಹಸ!
ಕಾಫಿನಾಡಲ್ಲಿ ಆಗಾಗ್ಗೆ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಅರಣ್ಯ ಸಂಪತ್ತು ನಾಶವಾಗುತ್ತಿದೆ. ಇದೀಗ ಮತ್ತೆ ಅರಣ್ಯದಲ್ಲಿ ಬೆಂಕಿ ಬಿದ್ದಿದ್ದು, ಬೆಂಕಿ ನಂದಿಸಲು ಆರಣ್ಯಾಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊರನಾಡು ಸಮೀಪದ ಅರಣ್ಯಕ್ಕೆ ಬೆಂಕಿ ಬಿದ್ದಿದ್ದು, ನೂರಾರು ಎಕರೆ ಅರಣ್ಯ ಸಂಪತ್ತು ಬೆಂಕಿಯಲ್ಲಿ ಸುಟ್ಟು ಕರಕಲಾಗಿ ಹೋಗುತ್ತಿದೆ. ಹೊರನಾಡು ಸಮೀಪದ ಅರಣ್ಯ ಪ್ರದೇಶದಲ್ಲಿ ಬೆಂಕಿಯ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಕೋಟ್ಯಂತರ ರೂ. ಮೌಲ್ಯದ ಅರಣ್ಯ ಸಂಪತ್ತು ನಾಶವಾಗಿ ಹೋಗಿದೆ. ನೂರಾರು ಎಕರೆಗೂ ಅಧಿಕ ಅರಣ್ಯ ಸುಟ್ಟು ಹೋಗುತ್ತಿದ್ದು, ಬೆಂಕಿ ನಂದಿಸಲಾಗದೆ ಅರಣ್ಯ ಸಿಬ್ಬಂದಿ ಪರದಾಡುತ್ತಿದ್ದಾರೆ. ಅರಣ್ಯದಲ್ಲಿ ಗಾಳಿಯ ರಭಸಕ್ಕೆ ಬೆಂಕಿ ಹಬ್ಬುತ್ತಿದೆ. ಬೆಂಕಿ ಬಿದ್ದ ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ದೌಡಾಯಿಸಿದ್ದು, ಸಿಬ್ಬಂದಿ ಜೊತೆ ಸೇರಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.