ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಗೋಮಾಳ ಜಾಗ ಉಳಿಸಿಕೊಳ್ಳಲು ಕುರಿಗಾಹಿಗಳ ಹೋರಾಟ - ಗೋಮಾಳ ಜಾಗ

ದನಕರು, ಕುರಿಗಳನ್ನು ಮೇಯಿಸುತ್ತಿದ್ದ ಜಾಗಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರೈತರು, ಕುರಿಗಾಹಿಗಳು ಬೃಹತ್ ಪ್ರತಿಭಟನೆ ನಡೆಸಿ ಈ ಆದೇಶವನ್ನು ಶೀಘ್ರವಾಗಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

farmers-protest-over-taluk-administration-on-gomala-land
ಗೋಮಾಳ ಜಾಗ ಉಳಿಸಿಕೊಳ್ಳಲು ಕುರಿಗಾಹಿಗಳ ಹೋರಾಟ

By

Published : Sep 10, 2021, 4:56 PM IST

ಚಿಕ್ಕಮಗಳೂರು:ಜಾನುವಾರುಗಳು ಮೇಯಲು ಮೀಸಲಿಟ್ಟಿದ್ದ ಗೋಮಾಳ ಜಾಗಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿ ಆದೇಶ ಹೊರಿಡಿಸಿರುವುದಕ್ಕೆ ಕುರಿಗಾಹಿಗಳು ಹಾಗೂ ರೈತರು ಪ್ರತಿಭಟನೆ ನಡೆಸಿದ್ದಾರೆ.

ಗೋಮಾಳದಲ್ಲಿ ಕುರಿಗಳು ಮೇಯುವುದು ಮತ್ತು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದು, ರೈತರು ಮತ್ತು ಕುರಿಗಾಹಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ಕುರಿಗಾವಲು ಉಳಿವಿಗಾಗಿ ನೂರಾರು ಕುರಿಗಾಹಿಗಳು, ರೈತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

ಗೋಮಾಳ ಜಾಗ ಉಳಿಸಿಕೊಳ್ಳಲು ಕುರಿಗಾಹಿಗಳ ಹೋರಾಟ

ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಬಳಿಯಿಂದ ಆರಂಭಗೊಂಡ ಪ್ರತಿಭಟನೆಯನ್ನು ತಡೆಯಲು ಪೊಲೀಸರು ಬ್ಯಾರಿಕೇಡ್​​ಗಳ ಅಳವಡಿಸಿದ್ದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾನಿರತರ ನಡುವೆ ವಾಗ್ವಾದ ನಡೆದಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಏನಿದು ಘಟನೆ?

ಕಡೂರು ತಾಲೂಕಿನ ಎಮ್ಮೆದೊಡ್ಡಿಯ ಸರ್ವೇ ನಂಬರ್ 70ರ ಸುಮಾರು 430 ಎಕರೆಯಷ್ಟು ಜಾಗದಲ್ಲಿ ಈ ಮೊದಲು ಕುರಿ, ದನಕರುಗಳನ್ನು ಮೇಯಿಸಲಾಗುತ್ತಿತ್ತು. ಇದೇ ಪ್ರದೇಶವನ್ನು ಕೆಲವರು ಒತ್ತುವರಿ ಮಾಡಿರುವ ಆರೋಪ ಕೂಡ ಕೇಳಿಬಂದಿತ್ತು. ಹೀಗಾಗಿ ಇದನ್ನು ಪ್ರಶ್ನೆ ಮಾಡಿದವರ ಮೇಲೆಯೇ ಸುಳ್ಳು ಕೇಸ್ ಹಾಕಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಅನೇಕ ದಶಕಗಳಿಂದ ಇದೇ ಗೋಮಾಳದಲ್ಲಿ ದನಕರುಗಳು, ಕುರಿಗಳನ್ನು ಮೇಯಿಸುತ್ತಿದ್ದ ಪ್ರದೇಶವನ್ನು ಸಾರ್ವಜನಿಕ ನಿರ್ಬಂಧಿತ ಪ್ರದೇಶವನ್ನಾಗಿ ತಹಶೀಲ್ದಾರ್​ ಆದೇಶಿಸಿದ್ದಾರೆ. ಈ ಬೃಹತ್ ಗೋಮಾಳಕ್ಕೆ ಸಾರ್ವಜನಿಕರು ಪ್ರವೇಶಿಸದಂತೆ ದೊಡ್ಡ ದೊಡ್ಡ ಟ್ರಂಚ್​ಗಳ ತೆಗೆಯಲಾಗಿದೆ. ತಾಲೂಕು ಆಡಳಿತದ ಈ ನಿರ್ಧಾರದಿಂದ ರೈತರು ಹಾಗೂ ಕುರಿಗಾಹಿಗಳು ಆಕ್ರೋಶಗೊಂಡಿದ್ದಾರೆ.

ಆದರೆ ಕುರಿಗಳ ಮೇಯಿಸಲು ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ತಾಲೂಕು ಆಡಳಿತ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ:ಬಿಇ ಮಾಡಿದವ ಕೆಲಸಕ್ಕೆ ಸೇರಿದ್ರೆ ವರ್ಷಕ್ಕೆ 3 ಲಕ್ಷ ರೂ.. ಆದ್ರೆ, ರೈತನಾದ್ರೆ 30 ಲಕ್ಷ ರೂ. ಗಳಿಕೆ ಸಾಧ್ಯ..

ABOUT THE AUTHOR

...view details