ಚಿಕ್ಕಮಗಳೂರು:ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಭದ್ರಾ ಅಭಯಾರಣ್ಯದ ವಲಯದಲ್ಲಿ ಎಂಟಕ್ಕೂ ಹೆಚ್ಚು ಕಾಡು ಹಂದಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
15 ದಿನದಲ್ಲಿ ಎಂಟು ಕಾಡು ಹಂದಿ ಸಾವು: ಆತಂಕದಲ್ಲಿ ಭದ್ರಾ ಅಭಯಾರಣ್ಯ ವ್ಯಾಪ್ತಿ ಜನರು..!
ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಭದ್ರಾ ಅಭಯಾರಣ್ಯದ ವಲಯದಲ್ಲಿ ಎಂಟಕ್ಕೂ ಹೆಚ್ಚು ಕಾಡು ಹಂದಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಳೆದ 15 ದಿನಗಳಿಂದ ಎಂಟಕ್ಕೂ ಹೆಚ್ಚು ಕಾಡು ಹಂದಿಗಳು ಸಾವನ್ನಪ್ಪಿದ್ದು, ಭದ್ರಾ ಹಿನ್ನೀರಿನ ಸುತ್ತಮುತ್ತಲ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೆಲ ಹಂದಿಗಳ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ವಿಷಯ ಅರಣ್ಯ ಇಲಾಖೆಯ ಗಮನಕ್ಕೆ ಬಂದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈಗಾಗಲೇ ದೇಹದ ಮಾದರಿಯನ್ನು ಸಂಗ್ರಹ ಮಾಡಿ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥಗೆ ಪರೀಕ್ಷೆಗೆ ರವಾನೆ ಮಾಡಿದ್ದು, ವರದಿ ಬಂದ ನಂತರ ಹಂದಿಗಳು ಸಾವನ್ನಪ್ಪುತ್ತಿರುವ ಕುರಿತು ನಿಖರ ಉತ್ತರ ಸಿಗಲಿದೆ. ಈ ರೀತಿಯಾಗಿ ಎಂಟಕ್ಕೂ ಹೆಚ್ಚು ಹಂದಿಗಳು ಸಾವನ್ನಪ್ಪಿರುವ ಹಿನ್ನಲೆ ಸುತ್ತ ಮುತ್ತಲಿನ ಹಳ್ಳಿಯ ಜನರು ಆತಂಕದಲ್ಲಿರುವಂತೆ ಮಾಡಿದೆ.