ಚಿಕ್ಕಮಗಳೂರು:ಮಗು ಮಾರಾಟ ಆರೋಪ ಹೊತ್ತಿದ್ದ ಕೊಪ್ಪ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ವೈದ್ಯ ಬಾಲಕೃಷ್ಣ ಪೊಲೀಸರ ಮುಂದೆ ಶರಣಾಗಿದ್ದಾರೆ.
ಅವಿವಾಹಿತ ಯುವತಿಗೆ ಜನಿಸಿದ ಮಗುವೊಂದನ್ನು ವೈದ್ಯ ಬಾಲಕೃಷ್ಣ ಹಾಗೂ ದಾದಿಯರು ಸೇರಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ವೈದ್ಯರು ಹಾಗೂ ದಾದಿಯರು ನಾಪತ್ತೆಯಾಗಿದ್ದರು.