ಚಿಕ್ಕಮಗಳೂರು:ವೈರಲ್ ಜ್ವರ ತಂಪಾದ ಹವಾಮಾನವಿರುವ ಮಳೆಗಾಲದಲ್ಲಿ ಬರುವುದು ಸಾಮಾನ್ಯ ವಿಚಾರ.ಮಳೆಗಾಲವೆಂದರೆ ಅದು ಜ್ವರ, ಶೀತ, ಕೆಮ್ಮು ಮತ್ತು ನೆಗಡಿಯೊಂದಿಗೆ ಬದುಕುವಂತಹ ಸಮಯ. ಆದರೆ, ವೈರಲ್ ಜ್ವರವನ್ನು ವೈದ್ಯರು ಕೋವಿಡ್ನಿಂದ ಯಾವ ರೀತಿ ಬೇರ್ಪಡಿಸಿ ಚಿಕಿತ್ಸೆ ನೀಡುತ್ತಾರೆ ಎಂಬುದು ಒಂದು ಚಿಂತೆಯಾಗಿದೆ.
ಈ ಕುರಿತು ಜಿಲ್ಲಾ ಸರ್ಜನ್ ಮೋಹನ್ ಕುಮಾರ್ ಮಾತನಾಡಿ, ಕೋವಿಡ್-19 ಮತ್ತು ವೈರಲ್ ಜ್ವರದ ರೋಗ ಲಕ್ಷಣಗಳು ಒಂದೇ ಆಗಿದ್ದರೂ ಗಂಟಲು ದ್ರವ ತೆಗೆದು ಪರೀಕ್ಷೆ ನಡೆಸಿದ ನಂತರವೇ ಅದರ ವ್ಯತ್ಯಾಸ ಗೊತ್ತಾಗಲಿದೆ. ಕೋವಿಡ್ ಜಗತ್ತಿಗೆ ಹರಡಿದೆ. ಶೀತ, ಜ್ವರ, ಕಾಣಿಸಿಕೊಂಡರೆ ಐಎಲ್ಐ ಎಂದೂ ಕರೆಯುತ್ತೇವೆ. ಕೋವಿಡ್ ಇಲ್ಲದಿದ್ದರೇ ಚಿಕಿತ್ಸೆ ನೀಡುವ ವಿಧಾನ ಬೇರೆಯಾಗಿರುತ್ತದೆ. ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡರೆ ಆರ್ಟಿಪಿಸಿಆರ್ ಪರೀಕ್ಷೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.