ಚಿಕ್ಕಮಗಳೂರು:ಚಿಕ್ಕಮಗಳೂರಿನವರಾದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರಿಗೆ ತಾವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಹಾಗು ಕ್ರಿಯಾಶೀಲರಾಗಿ ಇರುವುದಕ್ಕೆ ಯೋಗಾಭ್ಯಾಸವೇ ಕಾರಣವಾಗಿದೆಯಂತೆ.
ವಿಶ್ವ ಯೋಗ ದಿನ: ಮಗನ ಜೊತೆ ಸಚಿವ ಸಿ.ಟಿ.ರವಿ ಯೋಗಾಭ್ಯಾಸ - ಯೋಗಭ್ಯಾಸ
ಅದೆಷ್ಟೇ ಒತ್ತಡದಲ್ಲಿರಲಿ ಅಥವಾ ಯಾವುದೇ ಜಾಗದಲ್ಲಿದ್ದರೂ ಸಚಿವ ಸಿ.ಟಿ.ರವಿ ಯೋಗಾಭ್ಯಾಸ ಬಿಡೋದಿಲ್ಲವಂತೆ. ಇದಕ್ಕೋಸ್ಕರ ಅವರು ಪ್ರತಿದಿನ ಕನಿಷ್ಠ ಅರ್ಧ ಗಂಟೆ ಮೀಸಲಿಡುತ್ತಾರೆ.
ಸಚಿವ ಸಿ.ಟಿ ರವಿ
ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ನಗರದ ಹೊರವಲಯದಲ್ಲಿರುವ ರಾಮನಹಳ್ಳಿಯ ತಮ್ಮ ಫಾರ್ಮ್ಹೌಸ್ನಲ್ಲಿ ಕಿರಿಯ ಮಗನ ಜೊತೆ ಅವರು ಯೋಗಾಭ್ಯಾಸ ನಡೆಸಿದರು.