ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಾಗೂ ದೇಶದಾದ್ಯಂತ ಲಾಕ್ಡೌನ್ ಆಗಿರುವ ಕಾರಣ ಚಿಕ್ಕಮಗಳೂರಲ್ಲಿ ಕುಟುಂಬಸ್ಥರೇ ಸೇರಿ ಸರಳ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ. ಕೇವಲ ಕುಟುಂಬದ 20 ಜನ ಸದಸ್ಯರ ನಡುವೆ ಅತ್ಯಂತ ಸರಳವಾಗಿ ಮದುವೆ ಕಾರ್ಯ ನೆರೆವೇರಿದೆ.
ವೈರಸ್ ಕಾಟದ ನಡುವೆ ಸರಳ ವಿವಾಹಕ್ಕೆ ಸಾಕ್ಷಿಯಾದ ಜೋಡಿ - ಕೊರೊನಾ ಎಫೆಕ್ಟ್
ಕೊರೊನಾ ಲಾಕ್ಡೌನ್ನಿಂದಾಗಿ ವಿವಾಹ ಶುಭ ಕಾರ್ಯಗಳಿಗೂ ಬ್ರೇಕ್ ಬಿದ್ದಿದೆ. ಸದ್ಯ ಚಿಕ್ಕಮಗಳೂರಿನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸರಳ ವಿವಾಹ ನೆರವೇರಿದೆ. 20 ಜನ ಸದಸ್ಯರ ನಡುವೆ ಅತ್ಯಂತ ಸರಳವಾಗಿ ಮದುವೆ ಕಾರ್ಯ ನೆರೆವೇರಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಈ ಮದುವೆ ನಿಗದಿಯಾಗಿತ್ತು. ಆದರೆ, ಈ ಎಲ್ಲ ಕಾರಣಗಳಿಂದ ವರನ ಮನೆಯಲ್ಲೇ ಸರಳ ಮದುವೆ ಸಮಾರಂಭ ನಡೆದಿದ್ದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೊರೊನಾ ಎಫೆಕ್ಟ್: 20 ಮಂದಿ ಕುಟುಂಬಸ್ಥರ ನಡುವೆ ಸರಳ ವಿವಾಹ
ಕೇವಲ 20 ಜನರಿಗೆ ಈ ಮದುವೆ ಸೀಮಿತವಾಗಿದ್ದು, ವಧು-ವರರ ಪೋಷಕರು, ಸಹೋದರರಷ್ಟೆ ಭಾಗಿಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೂಳೂರಿನಲ್ಲಿ ಅತೀ ಸರಳವಾಗಿ ಮನೆಯಲ್ಲಿಯೇ ವಿವಾಹ ನಡೆದಿದ್ದು, ಇಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಈ ಮದುವೆ ನಿಗದಿಯಾಗಿತ್ತು. ಆದರೆ, ಈ ಎಲ್ಲ ಕಾರಣಗಳಿಂದ ವರನ ಮನೆಯಲ್ಲೇ ಸರಳ ಮದುವೆ ಸಮಾರಂಭ ನಡೆದಿದ್ದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.