ಕರ್ನಾಟಕ

karnataka

ETV Bharat / state

ಕಾಫಿನಾಡಿಗೆ ಸಿಲಿಕಾನ್​ ಸಿಟಿಯ ಸೋಂಕು.. ಸಾರ್ವಜನಿಕರಲ್ಲಿ ಆತಂಕ

ಕಾಫಿನಾಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೀಗೆ ಏರಿಕೆಯಾಗುತ್ತಿರುವ ಪ್ರಕರಣಗಳಿಗೆ ರಾಜಧಾನಿ ಬೆಂಗಳೂರೇ ಕಂಟಕವಾಗುತ್ತಿದೆ ಎನ್ನಲಾಗುತ್ತಿದೆ.

corona in chikkamagaluru
ಚಿಕ್ಕಮಗಳೂರಿನಲ್ಲಿ ಕೊರೊನಾ

By

Published : Jun 29, 2020, 6:00 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದೊಂದು ವಾರದಲ್ಲಿ ನಗರದಲ್ಲಿ ಹಲವಾರು ಕೇಸ್ ಗಳು ಪತ್ತೆಯಾಗಿದ್ದು, ಕೊರೊನಾ ಹೆಮ್ಮಾರಿ ನಗರವಾಸಿಗಳ ನೆಮ್ಮದಿ ಕೆಡಿಸಿದೆ. ಈ ಎಲ್ಲದಕ್ಕೂ ರಾಜಧಾನಿ ಬೆಂಗಳೂರೇ ಲಿಂಕ್ ಅನ್ನೋದು ಬೆಚ್ಚಿ ಬೀಳಿಸುವ ಸಂಗತಿ ಬಯಲಾಗಿದೆ.

ಇಬ್ಬರು ಉದ್ಯೋಗಿಗಳು, ಇಬ್ಬರು ತರಕಾರಿ ವ್ಯಾಪಾರಿಗಳು, ಓರ್ವ ರಾಜಕೀಯ ಮುಖಂಡ ಮಾತ್ರವಲ್ಲದೇ ಈಗ ಕೆಎಸ್ಆರ್​​ಟಿಸಿ ಬಸ್ ಚಾಲಕನಲ್ಲಿಯೂ ಈ ಕೊರೊನಾ ಸೋಂಕು ಪತ್ತೆಯಾಗಿದೆ. ಚಿಕ್ಕಮಗಳೂರು ನಗರದ ದೋಣಿಕಣ ಏರಿಯಾದಲ್ಲಿ ವಾಸವಾಗಿದ್ದ ಚಾಲಕನಿಗೆ ಸೋಂಕು ಪತ್ತೆಯಾಗಿದ್ದರೂ, ಆ ಏರಿಯಾವನ್ನ ಸೀಲ್ ಡೌನ್ ಮಾಡದೇ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ. ಇದರಿಂದಾಗಿ ಸರ್ಕಾರದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಕೊರೊನಾ

ಕೇವಲ ಆಶಾ ಕಾರ್ಯಕರ್ತೆಯರು ಮಾತ್ರ ಈ ಪ್ರದೇಶದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಹೊರತಾಗಿ ಸೋಂಕಿತನ ಮನೆ ಸಮೀಪ ಬ್ಯಾರಿ ಕೇಡ್ ಹಾಕೋದಾಗಲಿ, ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸೋದಾಗಲಿ, ಯಾವುದನ್ನೂ ಕೂಡಾ ಅಧಿಕಾರಿಗಳು ಮಾಡಿಲ್ಲ. ಈ ಪ್ರದೇಶದಲ್ಲಿ ಕೆಲ ಜನರು ಬೇಕಾಬಿಟ್ಟಿ ಓಡಾಡುತ್ತಿದ್ದು, ಹೀಗೇ ಆದರೇ ಮುಂದೆ ನಮ್ಮ ಕತೆ ಏನು ಎಂದು ಸ್ಥಳೀಯರು ಯೋಚನೆ ಮಾಡುವಂತಾಗಿದೆ.

ಈಗ ಸದ್ಯಕ್ಕೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 53 ಪ್ರಕರಣಗಳು ಪತ್ತೆಯಾಗಿದ್ದು, ಈ ಪ್ರಕರಣಗಳು ಒಂದಲ್ಲಾ ಒಂದು ರೀತಿಯಲ್ಲಿ ಬೆಂಗಳೂರಿಗೆ ಸಂಬಂಧಿಸಿದ ಸೋಂಕು ಪ್ರಕರಣಗಳೇ ಆಗಿವೆ. ಕೊರೊನಾ ಸಮುದಾಯಕ್ಕೆ ಹರಡಿರುವ ಆತಂಕ ಜನರನ್ನು ಕಾಡುತ್ತಿದೆ.

ABOUT THE AUTHOR

...view details